ಬೆಂಗಳೂರು: ‘ನೇಕಾರ ಸಮ್ಮಾನ್’ ಯೋಜನೆಯಡಿ 5,000 ರೂ. ನೆರವು ನೀಡಿದ ಬೆನ್ನಲ್ಲೇ ನೇಕಾರರಿಗೆ ಸರ್ಕಾರ ಭರ್ಜರಿ ಪ್ಯಾಕೇಜ್ ಘೋಷಣೆ ಮಾಡಿದೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನೇಕಾರರ ಸಮಸ್ಯೆ ಬಗ್ಗೆ ಸಭೆ ನಡೆಸಲಾಗಿದ್ದು, ಕೈಮಗ್ಗ ನೇಕಾರರಿಗೆ ನೀಡುವ ಆರ್ಥಿಕ ನೆರವನ್ನು 2 ಸಾವಿರ ರೂ. ನಿಂದ 5,000 ರೂ.ಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.
2 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಶೇಕಡ 50ರಷ್ಟು ಸಹಾಯಧನ, ವಿದ್ಯುತ್ ಮಗ್ಗಗಳಿಗೆ 5 ಹೆಚ್.ಪಿ. ವರೆಗೆ ಉಚಿತ ವಿದ್ಯುತ್, ವಿದ್ಯುತ್ ಮಗ್ಗ ನೌಕರರಿಗೆ ನೇಕಾರ ಸಮ್ಮಾನ್ ಯೋಜನೆ ವಿಸ್ತರಣೆ, ಮನೆಯಲ್ಲಿ ಕೆಲಸ ಮಾಡುವ ನೇಕಾರರಿಗೆ ಗುಡಿ ಕೈಗಾರಿಕೆ ಎಂದು ಪರಿಗಣಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿನಾಯಿತಿ, ಶಾಲಾ ಮಕ್ಕಳಿಗೆ, ಇಲಾಖೆ ನೌಕರರಿಗೆ ನೇಕಾರರಿಂದ ಭಾಗಶಃ ಸಮವಸ್ತ್ರ ಖರೀದಿ ಸೇರಿದಂತೆ ಹಲವು ತೀರ್ಮಾನ ಕೈಗೊಳ್ಳಲಾಗಿದೆ.