
ಧಾರವಾಡ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ನೇಹಾ ಮತ್ತು ಫಯಾಜ್ ಪ್ರೀತಿಗೆ ನ್ಯಾಯ ಸಿಕ್ಕಿತೆಂಬ ಅರ್ಥದಲ್ಲಿ ಜಸ್ಟಿಸ್ ಫಾರ್ ಲವ್, ನೇಹಾ-ಫಯಾಜ್ ಟ್ರೂ ಲವ್ ಎಂದು ಇನ್ಸ್ಟಾಗ್ರಾಮ್ ನಲ್ಲಿ ಧಾರವಾಡದ ಸಾಧಿಕ್ ತಡಕೋಡ ಮತ್ತು ಆದಿಲ್ ಎಂಬುವರು ಪೋಸ್ಟ್ ಮಾಡಿದ್ದರು.
ಇದನ್ನು ಗಮನಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಇಬ್ಬರು ಆರೋಪಿಗಳನ್ನು ತಾವೇ ಹಿಡಿದುಕೊಂಡು ಶನಿವಾರ ತಡರಾತ್ರಿ ವಿದ್ಯಾಗಿರಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕೆಲಕಾಲ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.