ಹಾಡುಗಾರ್ತಿ ಹಾಗೂ ರಿಯಾಲಿಟಿ ಷೋ ಒಂದರ ತೀರ್ಪುಗಾರರೂ ಆಗಿದ್ದ ನೇಹಾ ಕಕ್ಕರ್ ಯಾರಿಗೆ ತಾನೇ ಗೊತ್ತಿಲ್ಲ ? ತನ್ನ ಕಷ್ಟದ ಹಳೆಯ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ.
ಸೂಪರ್ ಡ್ಯಾನ್ಸರ್ ಎಂಬ ನೃತ್ಯ ಸ್ಪರ್ಧೆಗೆ ವಿಶೇಷ ಅತಿಥಿಯಾಗಿ ಬಂದಿದ್ದ ನೇಹಾ, ಈ ಹಿಂದೆ ತಾವು ರಿಷಿಕೇಶದಲ್ಲಿ ಇದ್ದದ್ದನ್ನು ನೆನಪಿಸಿಕೊಂಡಿದ್ದಾರೆ.
‘ರಾಜಕುಮಾರ’, ‘ಯುವರತ್ನ’ ಯಶಸ್ಸಿನ ನಂತ್ರ ಅಪ್ಪು, ಆನಂದರಾಮ್ ಹೊಸ ಚಿತ್ರ
“ನಾವು ರಿಷಿಕೇಶದಲ್ಲಿ ಇದ್ದಾಗ ನನಗಾಗ ಸುಮಾರು ನಾಲ್ಕು ವರ್ಷ, ಆಗಲೇ ನಾನು ಅಕ್ಕನೊಡನೆ ಹಾಡಲು ಶುರುಮಾಡಿದ್ದೆ. ಈಗ ರಿಷಿಕೇಶ ಮುಂದುವರೆದಿದೆ, ಆದರೆ ಆಗೆಲ್ಲ ಜನರು ನಮ್ಮ ಅಪ್ಪನನ್ನು ಹಂಗಿಸುತ್ತಿದ್ದರು. ಹೆಣ್ಣು ಮಕ್ಕಳಿಂದ ಹಾಡು ಹೇಳಿಸುವನು ಎಂಥ ಅಪ್ಪ ಇವನು” ಎಂದು ತನ್ನ ತಂದೆಯನ್ನು ಹಂಗಿಸುತ್ತಿದ್ದ ದಿನಗಳನ್ನು ನೆನೆದು ನೇಹಾ ಭಾವುಕರಾದರು.
ನೇಹಾ, ತನ್ನ ತಂದೆ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಾಗಿ ತನ್ನ ಹೆಣ್ಣು ಮಕ್ಕಳ ಪ್ರತಿಭೆ ಜಗತ್ತಿನ ಮುಂದೆ ಎದ್ದು ನಿಲ್ಲುವಂತೆ ಮಾಡಲು ಸಫಲರಾದರು. “ನಾವು ಚಿಕ್ಕವರಿದ್ದಾಗ ಬೆಳಗ್ಗೆ ಅಥವಾ ರಾತ್ರಿ ಭಜನೆಗಾಗಿ ಹಾಡುತ್ತಿದ್ದೆವು. ಆದರೆ ಜನರಿಗೆ ಹೆಣ್ಣು ಮಕ್ಕಳು ಹೀಗೆಲ್ಲ ಭಜನೆ ಮಾಡುವುದನ್ನು ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ನಮ್ಮ ತಂದೆ – ತಾಯಿ ಇಬ್ಬರು ನಮಗೆ ಬೆನ್ನೆಲುಬಾಗಿದ್ದರು” ಎಂದು ನೇಹಾ ಹೇಳಿಕೊಂಡಿದ್ದಾರೆ.
https://www.youtube.com/watch?v=Ta_rcuF_jYc&feature=youtu.be