
ಇನ್ನು ಸೆಲೆಬ್ರೆಟಿಗಳಂತೂ ಹಬ್ಬದ ಸಮಯದಲ್ಲೂ ಸಿಹಿ ತಿನಿಸುಗಳನ್ನು ತಿನ್ನುವುದಿಲ್ಲ ಅಂತಾ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪೆಂದು ಸಾಬೀತು ಪಡಿಸ್ತಾರೆ ನಟಿ ನೇಹಾ ಧೂಪಿಯಾ. ಡಯೆಟ್ ಎಲ್ಲಾ ಮರೆತು ಸಾಮಾನ್ಯರಂತೆಯೇ ನೇಹಾ ಹಾಗೂ ಅವರ ಪತಿ ಅಂಗದ್ ಬೇಡಿ ಹಬ್ಬದ ಉತ್ಸಾಹದಲ್ಲಿ ಮುಳುಗುತ್ತಾರೆ. ಅಲ್ಲದೆ ಈ ಬಗ್ಗೆ ತನ್ನ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯನ್ನೂ ಕೂಡ ಪೋಸ್ಟ್ ಮಾಡಿದ್ದಾರೆ.
ನೇಹಾ ಪತಿ ಅಂಗದ್ ಬೇಡಿ ಅವರಿಗೆ ಲಡ್ಡು ಅಂದ್ರೆ ಪಂಚಪ್ರಾಣವಂತೆ. ಅಂಗದ್ ಲಡ್ಡು ತಿನ್ನುವ ವಿಡಿಯೋವನ್ನು ನೇಹಾ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅಂಗದ್ ಲಡ್ಡು ತಿನ್ನುವುದರಲ್ಲಿ ನಂಬರ್ ಒನ್ ಎಂದು ಹೇಳಿದ್ದಾರೆ. ಬರೋಬ್ಬರಿ ಇವರು 10 ಲಡ್ಡುಗಳನ್ನು ತಿಂದಿದ್ದಾರಂತೆ. ಅಂಗದ್ ಲಡ್ಡು ತಿನ್ನುವುದನ್ನು ನೋಡಿ ನೆಟ್ಟಿಗರು ಕೂಡ ಆಶ್ಚರ್ಯಚಕಿತರಾಗಿದ್ದಾರೆ.