ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) (NEET UG result) ಯುಜಿ 2023 ರ ಫಲಿತಾಂಶಗಳನ್ನು ಜೂನ್ ಎರಡನೇ ವಾರದಲ್ಲಿ ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
neet.nta.nic.in. ಅಧಿಕೃತ ವೆಬ್ಸೈಟ್ ಮೂಲಕ ವಿದ್ಯಾರ್ಥಿಗಳು ತಮ್ಮ ಸ್ಕೋರ್ ಕಾರ್ಡ್ (Score card) ಡೌನ್ ಲೋಡ್ ಮಾಡಬಹುದಾಗಿದೆ.
ಮಣಿಪುರದಲ್ಲಿ ನಡೆಯಿತ್ತಿರುವ ಹಿಂಸಾಚಾರದಿಂದಾಗಿ ಮೇ 7 ರಂದು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಮಣಿಪುರದ ಸುಮಾರು 8,700 ಅಭ್ಯರ್ಥಿಗಳಿಗೆ ಹತ್ತು ವಿವಿಧ ನಗರಗಳಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಯಿತು.
ದೇಶದ ಇತರ ಎಲ್ಲಾ ಭಾಗಗಳ ಅಭ್ಯರ್ಥಿಗಳಿಗೆ, ವೈದ್ಯಕೀಯ ಪ್ರವೇಶ ಪರೀಕ್ಷೆ (Entrance Test) ಮೇ 7 ರಂದು ನಡೆಯಿತು, ಶೇಕಡಾ 97.7 ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು.