ವೈದ್ಯಕೀಯ, ದಂತ ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ನೀಟ್ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು, ಹಿಮಾಚಲ ಪ್ರದೇಶದ ಅಮೀರ್ಪುರ್ ಜಿಲ್ಲೆಯ ಪುಟ್ಟ ಗ್ರಾಮವೊಂದರ ಇಬ್ಬರು ವಿದ್ಯಾರ್ಥಿನಿಯರು ಉತ್ತಮ ಅಂಕ ಗಳಿಸುವ ಮೂಲಕ ವೈದ್ಯರಾಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿದ್ದಾರೆ.
ಈ ಇಬ್ಬರು ಅವಳಿ ಸಹೋದರಿಯರಾಗಿದ್ದು, ಇವರ ತಂದೆ ವೃತ್ತಿಯಲ್ಲಿ ಟ್ರಕ್ ಚಾಲಕರಾಗಿದ್ದಾರೆ. ಬಡತನದ ಮಧ್ಯೆಯೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿರುವ ಕುಶಾಲ್ ಕುಮಾರ್, ಪುತ್ರಿಯರ ಈ ಸಾಧನೆಗೆ ಅಪಾರ ಸಂತಸಗೊಂಡಿದ್ದಾರೆ.
ಅಮೀರ್ಪುರದ ಕೇಂದ್ರೀಯ ವಿದ್ಯಾಲಯದಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ಅವಳಿ ಸಹೋದರಿಯರ ಪೈಕಿ ಸಿಯಾ 720ಕ್ಕೆ 645 ಅಂಕ ಗಳಿಸಿದ್ದರೆ ಆಕೆಯ ಸಹೋದರಿ ರಿಯಾ 617 ಅಂಕ ಪಡೆದಿದ್ದಾರೆ. ಗ್ರಾಮದ ಇಬ್ಬರು ವಿದ್ಯಾರ್ಥಿನಿಯರು ಈ ಸಾಧನೆ ಮಾಡಿರುವುದಕ್ಕೆ ಅಲ್ಲಿನ ಜನ ಖುಷಿಪಟ್ಟಿದ್ದಾರೆ.