ನವದೆಹಲಿ: ವೈದ್ಯಕೀಯ ಪದವಿಯ ನೀಟ್ ಯುಜಿ ಪ್ರವೇಶ ಪರೀಕ್ಷೆ ಅಕ್ರಮದ ಬೆನ್ನಲ್ಲೇ ಜೂನ್ 23ರ ಭಾನುವಾರ ನಡೆಯಬೇಕಿದ್ದ ವೈದ್ಯಕೀಯ ಸ್ನಾತಕೋತ್ತರ ನೀಟ್ ಪಿಜಿ ಪ್ರವೇಶ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಮುಂದೂಡಿದೆ.
ರಾಷ್ಟ್ರೀಯ ಪರೀಕ್ಷಾ ಮಂಡಳಿ ನೀಟ್ ಪಿಜಿ ಪ್ರವೇಶ ಪರೀಕ್ಷೆ ನಡೆಸಬೇಕಿತ್ತು. ಭಾನುವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದ್ದು, ನಂತರ ಹೊಸ ದಿನಾಂಕ ತಿಳಿಸಲಾಗುತ್ತದೆ. ನೀಟ್ ಪಿಜಿ ಪರೀಕ್ಷೆ 270 ಕೇಂದ್ರಗಳಲ್ಲಿ ನಡೆಯಬೇಕಿತ್ತು. ಎರಡು ಲಕ್ಷ ಪರೀಕ್ಷಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಮುಂಜಾಗ್ರತೆ ಕ್ರಮವಾಗಿ ಪರೀಕ್ಷೆ ಮುಂದೂಡಲಾಗಿದೆ ಎಂದು ಸರ್ಕಾರ ತಿಳಿಸಿದೆ.