
ನವದೆಹಲಿ: ಮೇ 21 ರಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್ -ಪಿಜಿ 2022) ನಡೆಯಲಿದೆ. ಈ ಪರೀಕ್ಷೆಯನ್ನು ಮುಂದೂಡಬೇಕೆಂದು ಸಲ್ಲಿಕೆಯಾದ ಅರ್ಜಿಗಳ ಬಗ್ಗೆ ಮೇ 13ರಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗುವುದು.
ನೀಟ್ ಪಿಜಿ 2021 ನೇ ಸಾಲಿನ ಕೌನ್ಸೆಲಿಂಗ್ ನಡೆಯುತ್ತಿರುವ ಕಾರಣ ಪರೀಕ್ಷೆ ಮುಂದೂಡಬೇಕೆಂದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪರ ವಾದ ಮಂಡಿಸಿದ ವಕೀಲ ರಾಕೇಶ್ ಖನ್ನಾ ಅವರು, ಶೀಘ್ರ ವಿಚಾರಣೆಗೆ ಮನವಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ನ್ಯಾ. ಡಿ.ವೈ. ಚಂದ್ರಚೂಡ್ ಅವರು ರಾಷ್ಟ್ರೀಯ ಪರೀಕ್ಷೆಯನ್ನು ಹೇಗೆ ಮುಂದೂಡಲಾಗುತ್ತದೆ? ನಿಗದಿಯಂತೆ ಮೇ 13ರಂದು ನೀಟ್ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.