ಬೆಂಗಳೂರು: ನೀಟ್ ಪರೀಕ್ಷಾ ಅಕ್ರಮವು ದೇಶದ ವಿದ್ಯಾರ್ಥಿಗಳಿಗೆ ಶಾಪವಾಗಿ ಪರಿಣಮಿಸಿದೆ ಎಂದು ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್ ನೀಟ್ ಪರೀಕ್ಷೆಯ ಕುರಿತು ನೀಡಿದ ಅಭಿಪ್ರಾಯವು ಕೇಂದ್ರ ಸರ್ಕಾರದ ಅದಕ್ಷತೆಯನ್ನು ಎತ್ತಿ ಹಿಡಿಯುತ್ತದೆ. ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಪರೀಕ್ಷಾ ಅಕ್ರಮಗಳನ್ನು ತಡೆಯುವುದನ್ನು ಪ್ರಮುಖ ಅಂಶವಾಗಿತ್ತು, ಆದರೆ ವಿದ್ಯಾರ್ಥಿಗಳ ಭವಿಷ್ಯದ ಕುರಿತು ಬಿಜೆಪಿ ಒಂದು ಪದವನ್ನೂ ಮಾತಾಡಿಲ್ಲ.
ನೀಟ್ ಅಕ್ರಮದ ಕುರಿತು ಪ್ರಧಾನಿ ಬಾಯಿ ಬಿಟ್ಟಿಲ್ಲ, ಕೇಂದ್ರದ ಯಾವೊಬ್ಬ ಸಚಿವರೂ ತುಟಿ ಬಿಚ್ಚಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.