ನವದೆಹಲಿ: ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಜುಲೈ 3ನೇ ವಾರದಿಂದ ಕೌನ್ಸೆಲಿಂಗ್ ನಡೆಸುವುದಾಗಿ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ನಾಲ್ಕು ಹಂತದಲ್ಲಿ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲಾಗುವುದು. ಪರೀಕ್ಷೆ ಅಕ್ರಮದ ಲಾಭ ಪಡೆದ ಫಲಾನುಭವಿಗಳನ್ನು ಕೌನ್ಸೆಲಿಂಗ್ ನ ಯಾವುದೇ ಹಂತದಲ್ಲಿ ಕೈ ಬಿಡಲು ಅಥವಾ ಪ್ರವೇಶ ಪಡೆದ ನಂತರ ಪಟ್ಟಿಯಿಂದ ಹೊರಗಿಡಲು ಕ್ರಮ ಕೈಗೊಳ್ಳಲಾಗಿದೆ.
ನೀಟ್ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿಲ್ಲ. ಅಂಕ ವಿತರಣೆಯಲ್ಲಿಯೂ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಮದ್ರಾಸ್ ಐಐಟಿ ತಜ್ಞರು ಸಲ್ಲಿಸಿದ ದತ್ತಾಂಶ ವಿಶ್ಲೇಷಣೆ ವರದಿಯ ಅಂಶಗಳನ್ನು ಉಲ್ಲೇಖಿಸಿದ ಕೇಂದ್ರ ಶಿಕ್ಷಣ ಸಚಿವಾಲಯ 44 ಪುಟಗಳ ಅಫಿಡವಿಟ್ ಸಲ್ಲಿಸಿದೆ.