ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವರು ಚಿನ್ನ ಗೆದ್ದ ಸಂಭ್ರಮದಲ್ಲಿ ನೆಟ್ಟಿಗರು ಹರಿಬಿಟ್ಟ ಮೀಮ್ಸ್ ಗಳ ಕ್ರಿಯಾಶೀಲತೆಯ ಉತ್ತುಂಗ ಮುಟ್ಟಿವೆ. ಆ ಪೈಕಿ ಒಂದನ್ನು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಕೂಡ ಟ್ವೀಟ್ ಮಾಡುವಷ್ಟು ಜನಪ್ರಿಯತೆ ಪಡೆದಿದೆ.
ಕುದುರೆ ಮೇಲೇರಿಕೊಂಡು ಜಾವಲಿನ್ ಹಿಡಿದು ಬರುತ್ತಿರುವ ನೀರಜ್ ಚೋಪ್ರಾ ಅವರ ಹೊಸ ಸೂಪರ್‍ಹಿಟ್ ಸರಣಿ ಚಿತ್ರ ‘ಗೇಮ್ ಆಫ್ ಥ್ರೋಸ್’ ಎಂದು ಪೋಸ್ಟರ್ ಹಾಕಲಾಗಿದೆ. ಇದು ಜನಪ್ರಿಯ ವೆಬ್ ಸರಣಿ ಗೇಮ್ ಆಫ್ ಥ್ರೋನ್ಸ್ ನ ಮಾರ್ಪಡಿಸಲಾದ ಪೋಸ್ಟರ್ ಕೂಡ ಹೌದು. ಜರ್ಮನಿ ಮೂಲದ ಅಥ್ಲೆಟಿಕ್ಸ್ ತರಬೇತುದಾರ ಡಾ. ಕ್ಲಾಸ್ ಬಾರ್ಟೊನೀಜ್ ರನ್ನ ಕೂಡ ಪೋಸ್ಟರ್‍ನಲ್ಲಿ ಸ್ಮರಿಸಿಕೊಳ್ಳಲಾಗಿದೆ.
ಸಂಭ್ರಮಾಚರಣೆಯಲ್ಲಿ ಮಿಂದೆದ್ದ ಚಿನ್ನದ ಹುಡುಗನ ಊರು
ಸಮರದ ಕುದುರೆ ಏರಿ ಬರುತ್ತಿರುವುದು ನೀರಜ್ ಚೋಪ್ರಾ ಆಗಿದ್ದರೆ, ಆ ಕುದುರೆ ಕಿಂಗ್ ಕ್ಲಾಸ್ ಎನ್ನಲಾಗಿದೆ.