
‘ದಿಲ್ ಕುಶ್’ ಚಿತ್ರ ತಂಡ ಇದೇ ಫೆಬ್ರವರಿ 28ಕ್ಕೆ ಚಾಮರಾಜಪೇಟೆಯಲ್ಲಿ ಹಾಡಿನ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದು, ”ನೀನೇ ನೀನೇ” ಎಂಬ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ. ಈ ಹಾಡಿಗೆ ನಿಹಾಲ್ ಮತ್ತು ಆರತಿ ಅಶ್ವಿನ್ ಧ್ವನಿಯಾಗಿದ್ದು, ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದಾರೆ. ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರದಲ್ಲಿ ರಂಜಿತ್ ಮತ್ತು ಸ್ಪಂದನ ಸೋಮಣ್ಣ ಪ್ರಮುಖ ಪಾತ್ರದಲ್ಲಿದ್ದು, ರಂಗಾಯಣ ರಘು, ಅರುಣ ಬಾಲ್ರಾಜ್, ಧರ್ಮಣ್ಣ ಕಡೂರ್, ಸೂರ್ಯ ಪ್ರವೀಣ್, ರಾಘು ರಾಮನ ಕೊಪ್ಪ, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಜಯಪ್ರಭಾ ಕಲರ್ ಪ್ರೇಮ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಜ್ಞಾನೇಶ್ ಬಿ ಮಾತಾಡ್ ಸಂಕಲನವಿದ್ದು, ನಿವಾಸ್ ನಾರಾಯಣ್ ಛಾಯಾಗ್ರಹಣವಿದೆ.
