
ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ ರಾಘವೇಂದ್ರ ಅಭಿನಯದ ‘ಕೊಂಡಾಣ’ ಚಿತ್ರದ ನೀನೇ ನೀನೇ ಎಂಬ ಮೆಲೋಡಿ ಹಾಡೊಂದನ್ನು ಆನಂದ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅಶೋಕ್ ಶೆಟ್ಟಿ ಮತ್ತು ಮಾಧುರಿ ಶೇಷಾದ್ರಿ ಧ್ವನಿಯಾಗಿದ್ದು, ಗಗನ್ ಬದರಿಯಾ ಸಂಗೀತ ಸಂಯೋಜನೆ ನೀಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿದೆ.
ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಖುಷಿ ರವಿ ಮತ್ತು ಭಾವನಾ ಮೆನನ್ ಪ್ರಮುಖ ಪಾತ್ರದಲ್ಲಿದ್ದು, ಫ್ಲೈಯಿಂಗ್ ಎಲಿಫ್ಯಾಂಟ್ ಸ್ಟೋರಿ ಟೆಲ್ಲರ್ಸ್ ಬ್ಯಾನರ್ ನಲ್ಲಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್ ಬಂಡವಾಳ ಹೂಡಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನ, ವಿಶ್ವಜಿತ್ ರಾವ್ ಛಾಯಾಗ್ರಹಣ, ಜೋಗಿ ಸಾಹಸ ನಿರ್ದೇಶನವಿದೆ.