
ಪ್ರಕರಣದ ವಿವರ: ಮಹೇಶ್ ಪಾಟೀದಾರ್ ಎಂಬಾತನ ಟ್ರ್ಯಾಕ್ಟರ್ ಅನ್ನು ಅಮೀನ್ ಮನ್ಸೂರಿ ಗ್ಯಾರೇಜಿಗೆ ರಿಪೇರಿಗೆ ಬಿಡಲಾಗಿತ್ತು. ಆದರೆ ರಿಪೇರಿ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಈ ಸಂದರ್ಭದಲ್ಲಿ ಮಹೇಶ್, 23 ವರ್ಷದ ಅಮೀನ್ ಮನ್ಸೂರಿಯನ್ನು ಕೊಲೆ ಮಾಡಿದ್ದಾನೆ.
ಹೀಗಾಗಿ ಮೃತನ ಕುಟುಂಬಸ್ಥರು ಹಾಗೂ ಸಂಬಂಧಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು, ಈ ಹಿಂದೆ ಬೇರೆ ಪ್ರಕರಣಗಳಲ್ಲಿ ಮಾಡಿದಂತೆ ಮಹೇಶ್ ಪಾಟೀದಾರ್ ಮನೆಯನ್ನು ಉರುಳಿಸಬೇಕು. ಹಾಗೂ ತಮಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆಗ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರಲ್ಲದೆ ಮಹೇಶ್ ತನ್ನ ನಿವಾಸವನ್ನು ಒತ್ತುವರಿ ಮಾಡಿಕೊಂಡು ಕಟ್ಟಿಕೊಂಡಿದ್ದರೆ ತೆರವುಗೊಳಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿದೆ.