alex Certify ಚರ್ಮದ ಸಮಸ್ಯೆ ನಿವಾರಣೆಗೆ ‘ಸೌಂದರ್ಯ’ ರಕ್ಷಣೆಗೆ ಬೆಸ್ಟ್ ಬಹುಪಯೋಗಿ ಬೇವಿನ ಸೊಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಸಮಸ್ಯೆ ನಿವಾರಣೆಗೆ ‘ಸೌಂದರ್ಯ’ ರಕ್ಷಣೆಗೆ ಬೆಸ್ಟ್ ಬಹುಪಯೋಗಿ ಬೇವಿನ ಸೊಪ್ಪು

ಬೇವಿನ ಮರ ಮನೆಯ ಬಳಿಯಲ್ಲಿ ಇದ್ದರೆ ಬೇರೆ ಸೌಂದರ್ಯ ಸಾಧನಗಳಿಗೆ ಕೆಲಸವಿಲ್ಲ ಅನ್ನೋದನ್ನು ಕೇಳಿದ್ದೇವೆ. ಯಾಕಂದ್ರೆ ಬೇವಿನ ಎಲೆಗಳು, ಬೇರು, ಎಣ್ಣೆ ಎಲ್ಲದರಲ್ಲೂ ಔಷಧೀಯ ಗುಣಗಳಿವೆ.

ಇದೊಂದು ಸೌಂದರ್ಯ ಸಾಧನವೆಂದರೆ ತಪ್ಪಾಗಲಾರದು. ಎಂತಹ ಚರ್ಮದ ಸಮಸ್ಯೆಯನ್ನು ಬೇಕಾದರೂ ಈ ಬೇವಿನಿಂದ ದೂರ ಮಾಡಿಕೊಳ್ಳಬಹುದು.

ಮೊಡವೆಗಳು ಹಾಗೂ ಕಪ್ಪು ಮಚ್ಚೆಯೇ

ಒಂದು ಹಿಡಿ ಬೇವಿನ ಸೊಪ್ಪನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಸ್ವಲ್ಪ ಹೊತ್ತಿನಲ್ಲಿ ನೀರು ಹಸಿರಾಗಿ ಬದಲಾಗುತ್ತದೆ. ಆರಿದ ಬಳಿಕ ನೀರನ್ನು ಸೋಸಿ ತೆಗೆದಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಹತ್ತಿಯಿಂದ ಆ ನೀರನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಉಜ್ಜಿದರೆ ಸಾಕು, ಮೊಡವೆಗಳು, ಮಚ್ಚೆಗಳು ದೂರವಾಗುತ್ತದೆ.

ಹಾಗೆ ಚರ್ಮ ಶುಷ್ಕಗೊಂಡು ಆಗಾಗ ನವೆಯ ಸಮಸ್ಯೆ ಬಾಧಿಸುತ್ತಿದ್ದಲ್ಲಿ, ಈ ನೀರನ್ನು ಸ್ನಾನದ ನೀರಿನೊಂದಿಗೆ ಬೆರೆಸಿ ಬಳಸಿದರೆ ಚರ್ಮ ಆರೋಗ್ಯಕರವಾಗಿ ಬದಲಾಗುತ್ತದೆ.

ಕಾಂತಿ ಹೆಚ್ಚಿಸಲು

ಬಿಸಿಲಿನ ಶಾಖಕ್ಕೆ ಮುಖ ಕಾಂತಿ ಕಳೆದುಕೊಂಡಿದ್ದರೆ, ಬೇವಿನ ಎಲೆಗಳನ್ನು ಹಾಗೂ ಗುಲಾಬಿ ದಳಗಳನ್ನು ಒಣಗಿಸಿಟ್ಟು ಪುಡಿ ಮಾಡಿಕೊಳ್ಳಿ. 2 ಚಮಚ ಪುಡಿಗೆ ಒಂದು ಚಮಚ ಮೊಸರು ಬೆರೆಸಿ ಕಲಸಿ. ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿ ಮುಖಕ್ಕೆ ಹೆಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಸದಾ ಹೀಗೆ ಮಾಡುತ್ತಿದ್ದರೆ ಮುಖವು ಕಳೆ ಕಳೆಯಾಗಿರುತ್ತದೆ.

ತ್ವಚೆಯಲ್ಲಿ ಜಿಡ್ಡಿನಂಶವಿದ್ದರೆ

ಬೇವಿನ ಎಲೆಗಳ ಪುಡಿ, ಶ್ರೀಗಂಧದ ಪುಡಿ, ಗುಲಾಬಿ ದಳಗಳ ಪುಡಿಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರ ಮಾಡಿಕೊಳ್ಳಿ. 1 ಚಮಚ ಪುಡಿಗೆ 3-4 ಹನಿ ಬೇವಿನ ಎಣ್ಣೆ, ಸ್ವಲ್ಪ ಜೇನು, ನಿಂಬೆ ರಸ ಹಾಕಿ ಕಲಸಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಒಣಗಿಸಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡಿದ್ದಲ್ಲಿ ಮುಖವು ತಾಜಾತನವನ್ನು ಪಡೆದುಕೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...