ಭಾರತದಲ್ಲಿ ಕೆಲ ವಸ್ತುಗಳು ಅಗ್ಗದ ಬೆಲೆಗೆ ಸಿಗುತ್ತವೆ. ಕೆಲ ಔಷಧಿ ಗುಣವುಳ್ಳ ಗಿಡದ ಬೇರು, ಎಲೆಗಳನ್ನು ಜನರು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಅವು ಉಚಿತವಾಗಿ ಸಿಕ್ಕರೂ ಅವುಗಳನ್ನು ಬಳಸುವವರಿಲ್ಲ. ಆದ್ರೆ ಭಾರತ ರಸ್ತೆ ಬದಿಯಲ್ಲಿ ಹಾಗೂ ಹಳ್ಳಿಗಳಲ್ಲಿ ಸಿಗುವ ಕೆಲ ಗಿಡಗಳನ್ನು ವಿದೇಶಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತದೆ.
ಭಾರತದಲ್ಲಿ ಬೇವಿನ ಎಲೆಗಳ ಬಳಕೆ ಕಡಿಮೆ. ಜನರು ಎಲೆಕ್ಟ್ರಿಕ್ ಬ್ರೆಷ್ ಬಳಕೆ ಶುರು ಮಾಡಿದ್ದಾರೆ. ಆದ್ರೆ ಅಮೆರಿಕಾದಲ್ಲಿ ಬೇವಿನ ಕಡ್ಡಿ ಪ್ರಸಿದ್ಧಿಗೆ ಬಂದಿದೆ. ಬೇವಿನ ಕಡ್ಡಿಯನ್ನು ಔಷಧಿ ಹೆಸರಿನಲ್ಲಿ ಆನ್ಲೈನ್ ವೆಬ್ಸೈಟ್ ಗಳು ಮಾರಾಟ ಮಾಡ್ತಿವೆ. ಬೇವಿನ ಕಡ್ಡಿಯನ್ನು ಸುಮಾರು 1800 ರೂಪಾಯಿಗೆ ಮಾರಾಟ ಮಾಡಲಾಗ್ತಿದೆ.
ಬೇವಿನ ಮರ ಬೆಳೆಸಿ, ಅದರ ಕಡ್ಡಿಯನ್ನು ಕಂಪನಿಗಳು ಮಾರಾಟ ಮಾಡ್ತಿವೆ. ಇದಕ್ಕೆ ಅಲ್ಲಿ ಹೆಚ್ಚಿನ ಬೇಡಿಕೆಯಿದೆ. 6 ಇಂಚು ಉದ್ದದ ಕಡ್ಡಿಯನ್ನು ಪ್ಯಾಕೆಟ್ ನಿಂದ ತೆಗೆದ ನಂತ್ರ 3 ತಿಂಗಳು ಬಳಸಬಹುದು. ಅದನ್ನು ಕಾಗದದಲ್ಲಿ ಸುತ್ತಿ ಫ್ರಿಜ್ ನಲ್ಲಿ ಇಡಬಹುದು. ಆದ್ರೆ ಫ್ರಿಜರ್ ನಲ್ಲಿ ಇಡುವಂತಿಲ್ಲ. ಅಮೆಜಾನ್ ನಲ್ಲಿ ಈ ಪ್ಯಾಕೆಟ್ ಬೆಲೆ 800 ರೂಪಾಯಿ. ಒಂದು ಪ್ಯಾಕ್ ನಲ್ಲಿ ನೂರು ಕಡ್ಡಿ ಇರುತ್ತದೆ.