alex Certify ಕೊಡಗಿನ ಬೆಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿದೆ ʼನೀಲಕುರಂಜಿʼ ಪುಷ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಡಗಿನ ಬೆಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿದೆ ʼನೀಲಕುರಂಜಿʼ ಪುಷ್ಪ

Rare Neelakurinji flowers bloom in Karnataka's Kodagu hills | The News Minuteಐದರಿಂದ 12 ವರ್ಷಗಳಿಗೊಮ್ಮೆ ಅರಳುವ ನೀಲಕುರಂಜಿ ಹೂವುಗಳನ್ನು ನೋಡಲು ಪ್ರಕೃತಿ ಪ್ರಿಯರು ಪಶ್ಚಿಮ ಘಟ್ಟಗಳ ಆಯ್ದ ಧಾಮಗಳಿಗೆ ದೂರದೂರುಗಳಿಂದ ಹೋಗುತ್ತಾರೆ.

ಕೊಡಗಿನ ಘಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿರುವ ಈ ನೀಲಕುರಂಜಿ ಪುಷ್ಪಗಳು, ಜಿಲ್ಲೆಯ ಮಂದಾಲ್ಪಟ್ಟಿ ಹಾಗೂ ಕೋಟೆ ಬೆಟ್ಟ ಮತ್ತು ಕುಮಾರ ಪರ್ವತಗಳ ಮೇಲೆ ಅರಳಿ ನಿಂತಿವೆ. ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಈ ಹೂವುಗಳನ್ನು ನೋಡಲು ಸರತಿಯಲ್ಲಿ ನಿಂತಿದ್ದಾರೆ.

ಕಳೆದ ವಾರವಷ್ಟೇ ಈ ಹೂವುಗಳು ಅರಳಲು ಆರಂಭವಾಗಿದ್ದು, ಮುಂದಿನ ಕೆಲ ವಾರಗಳಲ್ಲಿ ಇಡೀ ಪ್ರದೇಶ ನೀಲಮಯವಾಗಲಿದೆ.

ಪ್ರೇಮದ ಸಂಕೇತ ಎಂದು ಕರೆಯಲಾಗುವ ಈ ಹೂವಿನ 250ಕ್ಕೂ ಹೆಚ್ಚು ವಿಧಗಳು ವರ್ಷದ ಬೇರೆ ಬೇರೆ ಅವಧಿಯಲ್ಲಿ ಅರಳುತ್ತವೆ. ಕೆಲವೊಂದು ತಳಿಗಳು 14 ವರ್ಷಗಳಿಗೊಮ್ಮೆ ಅರಳುತ್ತವೆ. ಭಾರತದಲ್ಲಿ ನೀಲಕುರಿಂಜಿಯ 46 ವಿಧಗಳು ಕಂಡುಬರುತ್ತವೆ. ಈ ಸಸಿಯಲ್ಲಿ ಔಷಧೀಯ ಗುಣಗಳೂ ಇವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...