ಮಳೆಗಾಲ ಮತ್ತು ಚಳಿಗಾಲದಲ್ಲಿ ಚಿಕ್ಕ ಮಕ್ಕಳನ್ನು ಬಿಡದೆ ಕಾಡುವ ರೋಗಗಳೆಂದರೆ ಜ್ವರ, ಶೀತ, ಕೆಮ್ಮು, ಕಫ. ಇವುಗಳಿಗೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲೇ ಒಂದಷ್ಟು ಮನೆ ಮದ್ದುಗಳನ್ನು ಪ್ರಯತ್ನಿಸಬಹುದು.
ಕೆಮ್ಮಿದರೆ ಕಫ ಬರದ ಕೆಮ್ಮಿಗೆ ಒಣ ಕೆಮ್ಮು ಎನ್ನುತ್ತಾರೆ. ಇದಕ್ಕೆ ಕಾರಣ ಬ್ಯಾಕ್ಟೀರಿಯಾ ಸೂಕ್ಷ್ಮಾಣು ಜೀವಿಗಳು. ಜೇಷ್ಠ ಮದ್ದನ್ನು ಸಣ್ಣದಾಗಿ ಪುಡಿ ಮಾಡಿ ಇದನ್ನು ಬಿಸಿ ನೀರಿನಲ್ಲಿ ಕುದಿಸಬೇಕು. 10 ನಿಮಿಷ ಕುದಿಸಿದ ಬಳಿಕ ಶೋಧಿಸಿ. ಬೆಚ್ಚಗೆ ಇರುವಂತೆ ಮಕ್ಕಳಿಗೆ ದಿನಕ್ಕೆ 2 ಬಾರಿ ಕಾಲು ಲೋಟದಷ್ಟು ಕುಡಿಸಬೇಕು. ಇದರಿಂದ ಒಣ ಕೆಮ್ಮು ನಿವಾರಣೆ ಆಗುತ್ತದೆ.
ಒಂದು ಚಿಕ್ಕ ಪಾತ್ರೆಯಲ್ಲಿ ನಿಂಬೆಹಣ್ಣಿನ ರಸ ತೆಗೆದುಕೊಂಡು ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮಕ್ಕಳಿಗೆ ದಿನಕ್ಕೆ ಎರಡು ಬಾರಿ ಕೊಡುವುದರಿಂದ ಮಕ್ಕಳಲ್ಲಿ ಇರುವ ಒಣಕೆಮ್ಮು ನಿವಾರಣೆ ಆಗುತ್ತದೆ.
ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವಿದೆ. ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿನೀರು ತೆಗೆದುಕೊಂಡು ಎರಡು ಮೂರು ಹನಿಯಷ್ಟು ನೀಲಗಿರಿ ಎಣ್ಣೆಯನ್ನು ಹಾಕಿ, ಈ ಹಬೆಯನ್ನು ಮೂಗಿನಲ್ಲಿ ಉಸಿರು ತೆಗೆದುಕೊಂಡು ಬಾಯಲ್ಲಿ ಉಸಿರು ಬಿಡುವುದರಿಂದ ಒಣಕೆಮ್ಮು ಕಡಿಮೆಯಾಗುತ್ತದೆ.