ಕೆಲವರು ಊಟವಾದ ಮೇಲೆ ಒಂದು ತುಂಡು ಬೆಲ್ಲ ಸವಿಯೋದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಇದು ಕೇವಲ ಸಿಹಿ ತಿನ್ನಬೇಕು ಅನ್ನೋ ಆಸೆಯಿಂದ ಮಾಡುವುದಲ್ಲ. ಇದರ ಹಿಂದೆ ಆರೋಗ್ಯಕ್ಕೆ ಸಂಬಂಧಪಟ್ಟ ಕಾರಣಗಳೂ ಇವೆ. ಈ ರೀತಿ ಬೆಲ್ಲ ತಿನ್ನುವುದರಿಂದ ಅನೇಕ ಬಗೆಯ ಕಾಯಿಲೆಗಳಿಂದ ದೂರವಿರಬಹುದು.
ಬೆಲ್ಲ ತಿಂದರೆ ನಿಮ್ಮ ಹೊಟ್ಟೆಯ ಸಮಸ್ಯೆ ದೂರವಾಗುತ್ತದೆ. ಹಾಗಾಗಿಯೇ ಅನೇಕರು ಊಟವಾದ ಮೇಲೆ ಸ್ವಲ್ಪ ಬೆಲ್ಲವನ್ನು ಸೇವಿಸುತ್ತಾರೆ. ಇದರ ಹೊರತಾಗಿಯೂ ಬೆಲ್ಲದಿಂದ ಅನೇಕ ಪ್ರಯೋಜನಗಳಿವೆ. ಅವ್ಯಾವುದು ಅನ್ನೋದನ್ನು ನೋಡೋಣ.
ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ…
ಒಮ್ಮೊಮ್ಮೆ ವಿಪರೀತ ಸುಸ್ತು, ದೇಹದಲ್ಲಿ ಶಕ್ತಿಯೇ ಇಲ್ಲವೇನೋ ಎನಿಸುತ್ತದೆ. ಅದರ ಅರ್ಥ ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಯಿದೆ ಎಂದು. ಹಾಗಿದ್ದಾಗ ಪ್ರತಿನಿತ್ಯ ಸ್ವಲ್ಪ ಪ್ರಮಾಣದಲ್ಲಿ ಬೆಲ್ಲವನ್ನು ಸೇವನೆ ಮಾಡಬೇಕು. ಬೆಲ್ಲ ತಿನ್ನುವುದರಿಂದ ದೇಹವು ತ್ವರಿತ ಶಕ್ತಿಯನ್ನು ಪಡೆಯುತ್ತದೆ.
ಕೀಲು ನೋವು ಕಡಿಮೆ ಮಾಡುತ್ತದೆ…
ಇತ್ತೀಚಿನ ದಿನಗಳಲ್ಲಿ ಕೀಲು ನೋವಿನ ಸಮಸ್ಯೆ ಸಾಮಾನ್ಯ. ಬೆಲ್ಲ ತಿನ್ನುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. ಪ್ರತಿದಿನ ತಪ್ಪದೇ ಬೆಲ್ಲ ಸೇವಿಸಿದರೆ ಮಾತ್ರ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ.
ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ…
ಬಿಪಿ ನಿಯಂತ್ರಣದಲ್ಲಿಲ್ಲದವರು ಬೆಲ್ಲವನ್ನು ಸೇವಿಸಬೇಕು. ಬೆಲ್ಲ ನಿಮ್ಮ ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಪರಿಣಾಮ ಅನೇಕ ರೋಗಗಳು ನಿಮ್ಮಿಂದ ತಂತಾನೇ ದೂರ ಸರಿಯುತ್ತವೆ.
ಕಬ್ಬಿಣದ ಕೊರತೆ ನಿವಾರಣೆ…
ನಿಮ್ಮ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯಿದ್ದರೆ ನೀವು ನಿಯಮಿತವಾಗಿ ಔಷಧಿಗಳ ಬದಲಿಗೆ ಬೆಲ್ಲವನ್ನು ಸೇವಿಸಬೇಕು. ಇದರಿಂದ ನೀವು ಲಾಭ ಪಡೆಯುತ್ತೀರಿ. ದೇಹದಲ್ಲಿ ದೀರ್ಘಕಾಲದ ಕಬ್ಬಿಣದ ಕೊರತೆಯನ್ನು ಬೆಲ್ಲ ಸುಲಭವಾಗಿ ಸರಿದೂಗಿಸುತ್ತದೆ.