
ಹಿರಿಯ ನಟ ನೆಡುಮುಡಿ ವೇಣು ನಿಧನಕ್ಕೆ ಇಡೀ ಮಲಯಾಳಂ ಸಿನಿಮಾ ಇಂಡಸ್ಟ್ರಿ ಕಂಬನಿ ಮಿಡಿದೆ. ಮಲಯಾಳಂನ ಸಾಕಷ್ಟು ತಾರೆಯರು ನೆಡುಮುಡಿ ವೇಣು ನಿಧನಕ್ಕೆ ಸಂತಾಪ ಸೂಚಿಸಿ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಶೇರ್ ಮಾಡುತ್ತಿದ್ದಾರೆ.
ನಟಿ ಹಾಗೂ ನಿರ್ಮಾಪಕಿ ರೇವತಿ ಖ್ಯಾತ ನಟನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಪ್ರೀತಿ ಹಾಗೂ ಗೌರವದಿಂದ ನಿಮ್ಮನ್ನು ಎಂದಿಗೂ ನೆನೆಯುತ್ತೇನೆ. ನೀವು ನೀಡಿದ ಸಣ್ಣ ಮಾರ್ಗದರ್ಶನವು ನನಗೆ ದೊಡ್ಡ ಪಾಠವಾಗಿದೆ. ನಿಮ್ಮ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನಿಮ್ಮ ಪ್ರೀತಿ ಪಾತ್ರರಿಗೆ ನೀಡಲಿ ಎಂದು ಬರೆದಿದ್ದಾರೆ.
ನಟ ದುಲ್ಕರ್ ಸಲ್ಮಾನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೇಣು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಿಮ್ಮ ಆತ್ಮಕ್ಕೆ ಶಾಂತಿ ದೊರಕಲಿ ವೇಣು ಅಂಕಲ್. ಅತ್ಯದ್ಭುತ ನಟ ಹಾಗೂ ಸರಳ ಜೀವಿ ಎಂದು ಬರೆದಿದ್ದಾರೆ. ಇನ್ನುಳಿದಂತೆ ನಟಿ ಪಾರ್ವತಿ ಮೆನನ್, ನಟ ಹಾಗೂ ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್, ಪ್ರೇಮಂ ಖ್ಯಾತಿಯ ನಟ ನಿವಿನ್ ಪೌಲಿ ಸೇರಿದಂತೆ ಅನೇಕರು ಖ್ಯಾತ ನಟನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ರಂಗಭೂಮಿ ಕಲಾವಿದನಾಗಿ ವೃತ್ತಿ ಜೀವನದ ಆರಂಭಿಸಿದ ನೆಡುಮುಡಿ ವೇಣು 1978ರಲ್ಲಿ ಥಂಬು ಎಂಬ ಸಿನಿಮಾ ಮೂಲಕ ಸಿನಿ ಲೋಕವನ್ನು ಪ್ರವೇಶಿಸಿದ್ರು. ನಾಲ್ಕು ದಶಕಗಳ ಕಾಲ ಸಿನಿಮಾ ಇಂಡಸ್ಟ್ರಿಯಲ್ಲಿದ್ದ ವೇಣು 100ಕ್ಕೂ ಅಧಿಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.
https://www.instagram.com/p/CU4a3N1Iu_L/?utm_source=ig_web_copy_link
https://www.instagram.com/p/CU4g17HFPEe/?utm_source=ig_web_copy_link