
ಹೌದು..! ಪಾಕಿಸ್ತಾನ ಸರ್ಕಾರದ ಸಚಿವರೊಬ್ಬರು ರಾವಲ್ಪಿಂಡಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಾರಾಗೃಹಗಳ ಮಂತ್ರಿ ಹಾಗೂ ಪಂಜಾಬ್ ಸರ್ಕಾರದ ವಕ್ತಾರ ಫಯಾಜ್ ಉಲ್ ಹಸನ್ ಚೌಹಾಣ್, ಎಲೆಕ್ಟ್ರಾನಿಕ್ಸ್ ಅಂಗಡಿ ಉದ್ಘಾಟನೆಗೆ ರಿಬ್ಬನ್ ಕತ್ತರಿಸುವವರಿದ್ದರು. ಆದರೆ ರಿಬ್ಬನ್ ಕತ್ತರಿಸಲು ಅವರು ಹೆಣಗಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದರಿಂದ ಮುಜುಗರಕ್ಕೆ ಒಳಗಾದ ಸಚಿವರು ಕೊನೆಗೆ ತಮ್ಮ ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ.
ನಿಮ್ಮ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯಲ್ಲಿ ಉದ್ಘಾಟನಾ ಕಾರ್ಯಾಕ್ರಮ ನಡೆಸಲಾಗಿದೆ. ಕತ್ತರಿ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಅಂಗಡಿ ಮಾಲೀಕ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ಹೊಸ ವಿಶ್ವ ದಾಖಲೆಯೇ ಸ್ಥಾಪನೆಯಾಗಿದೆ ಎಂದು ಉರ್ದುವಿನಲ್ಲಿ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಯರ್ರಾಬಿರ್ರಿ ವೈರಲ್ ಆಗಿದೆ.