ಮಾನಸಿಕ ಒತ್ತಡಗಳಂಥ ಸಮಸ್ಯೆಗಳನ್ನು ಎದುರಿಸಲು ಮಕ್ಕಳ ನೆರವಿಗೆ ಬಂದಿರುವ ಅಮೆರಿಕದ ನೆಬ್ರಾಸ್ಕಾದ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು, ಟಿಕ್‌ಟಾಕ್ ವಿಡಿಯೋಗಳನ್ನು ತಮ್ಮ ಈ ಕೈಂಕರ್ಯಕ್ಕೆ ಅವಲಂಬಿಸಿದ್ದಾರೆ.
ತಮ್ಮ ’ಪಾಯಿಂಟ್ ಆಫ್ ವ್ಯೂ’ ಟಿಕ್‌ಟಾಕ್ ವಿಡಿಯೋಗಳ ಮೂಲಕ ವೈರಲ್ ಆಗಿರುವ ಜೋಶ್ ಮನ್ರೋ, ತಮ್ಮ ಥರಪಿ ಶ್ವಾನಾ ನಾಲಾನೊಂದಿಗೆ ಸೇರಿಕೊಂಡು ಖಿನ್ನತೆ, ಮಾನಸಿಕ ಕಿರಿಕಿರಿಗಳಲ್ಲದೇ ಹಿಂಸಾಚಾರದಂಥ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳ ನೆರವಿಗೆ ಆಗಮಿಸಿದ್ದಾರೆ.
ಅಪಾಯಕಾರಿ ‘ಮಿಲ್ಕ್ ಕ್ರೇಟ್’ ಚಾಲೆಂಜ್ ವಿಡಿಯೋಗಳನ್ನು ಕಿತ್ತೊಗೆದ ಟಿಕ್ ಟಾಕ್
ಮಕ್ಕಳಿಗೆ ವೈಯಕ್ತಿಕ ಸಮಯ ಅದೆಷ್ಟು ಮುಖ್ಯವೆಂದು ವಿವರಿಸುವ ಮನ್ರೋ ತಮ್ಮ ಸಣ್ಣ-ಪುಟ್ಟ ವಿಡಿಯೋಗಳ ಮೂಲಕ ಮಕ್ಕಳು ಎದುರಿಸಬಹುದಾದ ಸಂಭವನೀಯ ಸವಾಲುಗಳನ್ನು ಮರಸೃಷ್ಟಿಸಿ, ಅವುಗಳನ್ನು ಎದುರಿಸಲು ಏನೆಲ್ಲಾ ಮಾಡಬೇಕೆಂದು ತಿಳಿ ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.