alex Certify ಚೀನಾ, ಪಾಕ್ ಹಿಂದಿಕ್ಕಿ ಭಾರತ ‘ವಿಶ್ವ’ದಲ್ಲೇ ದಾಖಲೆ: ಹೊಸ ವರ್ಷದ ದಿನವೇ 60 ಸಾವಿರ ಶಿಶುಗಳ ಜನನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾ, ಪಾಕ್ ಹಿಂದಿಕ್ಕಿ ಭಾರತ ‘ವಿಶ್ವ’ದಲ್ಲೇ ದಾಖಲೆ: ಹೊಸ ವರ್ಷದ ದಿನವೇ 60 ಸಾವಿರ ಶಿಶುಗಳ ಜನನ

ನವದೆಹಲಿ: ಹೊಸ ವರ್ಷದ ದಿನ ಭಾರತದಲ್ಲಿ ಸುಮಾರು 60 ಸಾವಿರ ಮಕ್ಕಳು ಜನಿಸುವ ಸಾಧ್ಯತೆ ಇದೆ ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್) ಅಂದಾಜು ಮಾಡಿದೆ. ಇದು ವಿಶ್ವದಲ್ಲೇ ಅತಿ ಹೆಚ್ಚಿನದ್ದಾಗಿದೆ ಎಂದು ಹೇಳಲಾಗಿದೆ.

ಹೊಸ ವರ್ಷದ ಮೊದಲ ದಿನ ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಜನನ ದಾಖಲಾಗುವ ಸಾಧ್ಯತೆ ಇದೆ. 2021 ರ ಮೊದಲ ದಿನ ಸುಮಾರು 60,000 ಶಿಶುಗಳು ಜನಿಸುತ್ತವೆ ಎಂದು ಅಂದಾಜಿಸಲಾಗಿದೆ. ಆದರೂ, 2020 ರಲ್ಲಿ ಜನಿಸಿದ ಮಕ್ಕಳ ಸಂಖ್ಯೆಗಿಂತ 7390 ಕಡಿಮೆಯಾಗಿರುತ್ತದೆ ಎಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ ತಿಳಿಸಿದೆ.

ಜನವರಿ 1 ರಂದು ವಿಶ್ವದಾದ್ಯಂತ 3,71,504 ಕ್ಕೂ ಹೆಚ್ಚು ಶಿಶುಗಳು ಜನಿಸುವ ಸಾಧ್ಯತೆಯಿದ್ದು, ಇವರಲ್ಲಿ ಶೇಕಡ 52 ಜನನಗಳು ಕೇವಲ 10 ದೇಶದಲ್ಲಿ ದಾಖಲಾಗಲಿವೆ. ಜಾಗತಿಕವಾಗಿ ಅರ್ಧದಷ್ಟು ಜನನಗಳು 10 ದೇಶಗಳಲ್ಲಿ ನಡೆಯುತ್ತವೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ 59,995, ಚೀನಾ 35,615, ನೈಜೀರಿಯಾ 21,439, ಪಾಕಿಸ್ತಾನ 14,161 ,ಇಂಡೋನೇಷ್ಯಾ 12,336, ಇಥಿಯೋಪಿಯಾ 12,006, ಅಮೆರಿಕ 10,312, ಈಜಿಪ್ಟ್ 9455, ಬಾಂಗ್ಲಾದೇಶ 9236 ಹಾಗೂ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ 8640 ಜನನವಾಗುತ್ತದೆ ಎಂದು ವರದಿ ತಿಳಿಸಿದೆ.

ಜಾಗತಿಕವಾಗಿ 2021 ರಲ್ಲಿ 140 ದಶಲಕ್ಷ ಶಿಶುಗಳು ಜನಿಸುವ ಸಾಧ್ಯತೆ ಇದ್ದು, ಇದರ ಸರಾಸರಿ ಜೀವಿತಾವಧಿ 84 ವರ್ಷಗಳು ಎಂದು ಅಂದಾಜಿಸಲಾಗಿದೆ. ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆನ್ರಿಯೆಟಾ ಫೋರ್ ಅವರು, ಜನವರಿ 1, 2020 ರಂದು ಜನಿಸಿದ ಮಕ್ಕಳು ಒಂದು ವರ್ಷದ ಹಿಂದಿನದಕ್ಕಿಂತ ಭಿನ್ನವಾದ ಜಗತ್ತನ್ನು ಪ್ರವೇಶಿಸುತ್ತಾರೆ. ವಿಶ್ವ ಪ್ರಸ್ತುತ ಜಾಗತಿಕ ಸಾಂಕ್ರಾಮಿಕ ರೋಗ, ಆರ್ಥಿಕ ಕುಸಿತ, ಹೆಚ್ಚುತ್ತಿರುವ ಬಡತನ ಮತ್ತು ಅಸಮಾನತೆಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಯುನಿಸೆಫ್ ಕೆಲಸದ ಅಗತ್ಯತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...