alex Certify BIG NEWS: ದೇಶದಲ್ಲಿ ಬಡತನ ಮುಕ್ತರಾದ 25 ಕೋಟಿ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದಲ್ಲಿ ಬಡತನ ಮುಕ್ತರಾದ 25 ಕೋಟಿ ಜನ

ನವದೆಹಲಿ: ದೇಶದಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ. 2013 ರಿಂದ 2023ರ ಅವಧಿಯಲ್ಲಿ 24.8 ಕೋಟಿ ಭಾರತೀಯರು ಬಡತನ ರೇಖೆಯಿಂದ ಹೊರ ಬಂದಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ನೀತಿ ಆಯೋಗ ಸಿದ್ದಪಡಿಸಿದ್ದ ಬಹು ಆಯಾಮ ಬಡತನ ಅಳತೆಯ ಆಧಾರದಲ್ಲಿ ನಡೆಸಲಾದ ಅಧ್ಯಯನದಲ್ಲಿ ಈ ಮಾಹಿತಿ ಗೊತ್ತಾಗಿದೆ.

ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ರಾಜ್ಯಗಳು ಬಡತನ ಇಳಿಕೆ ಪ್ರಮಾಣದಲ್ಲಿ ಗರಿಷ್ಠ ಸಾಧನೆ ಮಾಡಿದ ಮೊದಲ ಮೂರು ಸ್ಥಾನಗಳಲ್ಲಿ ಇವೆ. ಉತ್ತರ ಪ್ರದೇಶದಲ್ಲಿ 5.94 ಕೋಟಿ, ಬಿಹಾರದಲ್ಲಿ 3.77 ಕೋಟಿ, ಮಧ್ಯಪ್ರದೇಶದಲ್ಲಿ 2.30 ಕೋಟಿ ಜನ ಬಡತನ ರೇಖೆಗಿಂತ ಹೊರಬಂದಿದ್ದಾರೆ.

ನೀತಿ ಆಯೋಗವು ಬಡತನವನ್ನು ಆರೋಗ್ಯ, ಶಿಕ್ಷಣ, ಜೀವನದ ಗುಣಮಟ್ಟ, ಪೌಷ್ಟಿಕ ಆಹಾರ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸೇರಿ ಹಲವು ವಿಭಾಗಗಳಲ್ಲಿ ಮಾಪನ ಮಾಡುತ್ತದೆ. ಇವುಗಳನ್ನು ಆಧರಿಸಿ ನಡೆಸಲಾದ ಅಧ್ಯಯನದಲ್ಲಿ 2013ರಲ್ಲಿ 20.17ರಷ್ಟು ಇದ್ದ ಬಡತನ 2023ರಲ್ಲಿ 11.28ಕ್ಕೆ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...