ಕೊರೊನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಕುಕ್ ದ್ವೀಪದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ದಕ್ಷಿಣ ಪೆಸಿಫಿಕ್ ದೇಶವು ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಿರುವ ಬೆನ್ನಲ್ಲೇ ಈ ಬೆಳವಣಿಗೆ ಬೆಳಕಿಗೆ ಬಂದಿದೆ.
ಸುಮಾರು 17 ಸಾವಿರ ಜನ ಸಂಖ್ಯೆ ಹೊಂದಿರುವ ಈ ರಾಷ್ಟ್ರವು ಜಾಗತಿಕವಾಗಿ ಅತೀ ಹೆಚ್ಚಿನ ವ್ಯಾಕ್ಸಿನೇಷನ್ ದರವನ್ನು ಹೊಂದಿದೆ. ಇಲ್ಲಿ ಲಸಿಕೆ ಪಡೆಯುವ ಯೋಗ್ಯತೆ ಇರುವ ಜನರಲ್ಲಿ 96 ಪ್ರತಿಶತದಷ್ಟು ಜನರು ಡಬಲ್ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ.
ಗುರುವಾರ ಕುಟುಂಬಸ್ಥರ ಜೊತೆಯಲ್ಲಿ ವಿಮಾನದಿಂದ ಬಂದು ಕ್ವಾರಂಟೈನ್ಗೆ ಒಳಗಾಗಿದ್ದ 10 ವರ್ಷದ ಬಾಲಕನಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ ಎಂದು ಪ್ರಧಾನಿ ಮಾರ್ಕ್ ಬ್ರೌನ್ ಹೇಳಿಕೆ ನೀಡಿದ್ದಾರೆ. ಸೋಂಕಿಗೊಳಗಾದ ಬಾಲಕ ನ್ಯೂಜಿಲೆಂಡ್ನಿಂದ ಬಂದಿದ್ದಾನೆ ಎನ್ನಲಾಗಿದೆ.