ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಶನಿವಾರ ತಡರಾತ್ರಿ (ಜನವರಿ 22) ಹ್ಯಾಕ್ ಮಾಡಲಾಗಿದೆ. ತಾಂತ್ರಿಕ ತಜ್ಞರು ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದು, ಆದಷ್ಟು ಬೇಗ ಹ್ಯಾಂಡಲ್ ಅನ್ನು ರಿಸ್ಟೋರ್ ಮಾಡಲಾಗುವುದು ಎಂದು ಪಡೆಯ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಮಾಹಿತಿ ನೀಡಿದ್ದಾರೆ.
@NDRFHQ ಎಂದಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕೃತ ಖಾತೆಯು ಹ್ಯಾಕ್ ಆಗಿದ್ದು, ಖಾತೆಯಲ್ಲಿ ಬೇರೆ ಸಂದೇಶಗಳನ್ನ ಪೋಸ್ಟ್ ಮಾಡಲಾಗಿದೆ. ಈ ಮೊದಲೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಧಿಕೃತವಾಗಿ ಪೋಸ್ಟ್ ಮಾಡಿದ ಸಂದೇಶಗಳು ಲೋಡ್ ಆಗುತ್ತಿಲ್ಲ. ಆದರೆ ಫೆಡರಲ್ ಫೋರ್ಸ್ನ ಅಧಿಕೃತ ಡಿಸ್ಪ್ಲೇ ಪಿಕ್ಚರ್ ಹಾಗೂ ಬಯೋ ಮೊದಲಿನ ಹಾಗೇ ಇದೆ. ಈ ಹಿಂದೆ ಪ್ರಧಾನಿ ಮೋದಿಯವರ ಖಾತೆಯು ಸಂಪೂರ್ಣವಾಗಿ ಅಲ್ಲದಿದ್ದರು, ಹ್ಯಾಕ್ ಆಗಿತ್ತು ಎಂದು ಸ್ವತಃ ಪಿಎಮ್ಒ ಕಛೇರಿ ತಿಳಿಸಿತ್ತು.
200 ಅಡಿ ಪ್ರಪಾತಕ್ಕೆ ಕಾರು ಉರುಳಿದರೂ ಸುರಕ್ಷಿತವಾಗಿ ಹೊರಬಂದ ಪ್ರಯಾಣಿಕರು….!
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಥವಾ ಜನಸಾಮಾನ್ಯರಲ್ಲಿ NDRF ಎಂದು ಜನಪ್ರಿಯವಾಗಿರುವ ಪಡೆಯು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳ ವಿರುದ್ಧ ಹೋರಾಡಲು 2006ರಲ್ಲಿ ಹುಟ್ಟಿಕೊಂಡಿತು. ಕೆಲ ದಿನಗಳ ಹಿಂದೆ ಅಂದರೆ ಜನವರಿ 19ರಂದು ತನ್ನ 17ನೇ ರೈಸಿಂಗ್ ದಿನವನ್ನು ಆಚರಿಸಿಕೊಂಡಿದೆ.