ನವದೆಹಲಿ: ಸುಧೀರ್ಘ 7 ಹಂತದ ಲೋಕಸಭೆ ಚುನಾವಣೆಯ ಮತದಾನ ಮುಕ್ತಾಯವಾಗುತ್ತಿದ್ದಂತೆ ವಿವಿಧ ಸಂಸ್ಥೆಗಳು, ವಾಹಿನಿಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಬಹುತೇಕ ಸಮೀಕ್ಷೆಗಳ ಪ್ರಕಾರ ಕೇಂದ್ರದಲ್ಲಿ ಮತ್ತೊಮ್ಮೆ ಎನ್.ಡಿ.ಎ. ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿದ್ದಾರೆ ಎನ್ನಲಾಗಿದೆ.
ಪಿಎಂಎಆರ್‌ಕ್ಯೂ ಸಮೀಕ್ಷೆ ಪ್ರಕಾರ ಬಿಜೆಪಿ -ಎನ್.ಡಿ.ಎ. 359, ಇಂಡಿಯಾ ಮೈತ್ರಿಕೂಟ 154. ಇತರರು 30 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಮ್ಯಾಟ್ರಿಜ್ ಎಕ್ಸಿಟ್ ಪೋಲ್ ಪ್ರಕಾರ ಎನ್.ಡಿ.ಎ. 353- 368, ಇಂಡಿಯಾ ಮೈತ್ರಿಕೂಟ 118 -133, ಇತರರು 43 -48 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.
ಜನ್ ಕಿ ಬಾತ್ ಮತದಾನೋತ್ತರ ಸಮೀಕ್ಷೆ ಎನ್.ಡಿ.ಎ. 377, ಇಂಡಿಯಾ ಮೈತ್ರಿಕೂಟ 151, ಇತರರು 15 ಸ್ಥಾನ ಗಳಿಸುವ ಸಾಧ್ಯತೆ ಇದೆ.
ಇಂಡಿಯಾ ನ್ಯೂಸ್ ಮತದಾನೋತ್ತರ ಸಮೀಕ್ಷೆ ಪ್ರಕಾರ ಎನ್.ಡಿ.ಎ. 371, ಇಂಡಿಯಾ ಮೈತ್ರಿಕೂಟ 125, ಇತರರು 47 ಸ್ಥಾನ ಗಳಿಸಲಿದ್ದಾರೆ.