ಭಾರತ-ಶ್ರೀಲಂಕಾ ಮಧ್ಯೆ ಮೂರು ಟಿ-20 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಲಕ್ನೋದಲ್ಲಿ ನಡೆದ್ರೆ ಉಳಿದ ಎರಡು ಪಂದ್ಯಗಳು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ. ಶ್ರೀಲಂಕಾ ಸರಣಿಗಾಗಿ ಭಾರತೀಯ ಪ್ರೇಕ್ಷಕರಿಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಿದೆ.
ಭಾರತ ಮತ್ತು ಶ್ರೀಲಂಕಾ ವಿರುದ್ಧದ ಸರಣಿ ವೀಕ್ಷಣೆಗೆ ಪ್ರೇಕ್ಷಕರಿಗೆ ಅನುಮತಿ ಸಿಗ್ತಿದೆ. ಲಕ್ನೋದಲ್ಲಿ ಮೊದಲ ಟಿ20 ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಆದರೆ, ಧರ್ಮಶಾಲಾದಲ್ಲಿ ನಡೆಯಲಿರುವ ಸರಣಿಯ ಕೊನೆಯ ಎರಡು ಟಿ20 ಪಂದ್ಯಗಳನ್ನು ಪ್ರೇಕ್ಷಕರು ಮೈದಾನದಲ್ಲಿಯೇ ವೀಕ್ಷಿಸಬಹುದಾಗಿದೆ. ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಅಭಿಮಾನಿಗಳಲ್ಲಿ ಖುಷಿ ತಂದಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಟಿ20 ಪಂದ್ಯಗಳ ಪೈಕಿ ಎರಡು ಪಂದ್ಯಗಳು ಫೆಬ್ರವರಿ 26 ಮತ್ತು ಫೆಬ್ರವರಿ 27 ರಂದು ನಡೆಯಲಿದೆ. ಈ ಪಂದ್ಯಗಳ ಟಿಕೆಟ್‌ಗಳ ಮಾರಾಟವೂ ಆರಂಭವಾಗಿದೆ. ಇವುಗಳಲ್ಲಿ ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಪ್ರವೇಶವಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಸರಣಿ ಗೆಲ್ಲುವ ಗುರಿ ಹೊಂದಿದೆ.