ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಬಿ. ಅಧಿಕಾರಿಗಳು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಇದುವರೆಗೆ 16 ಆರೋಪಿಗಳನ್ನು ಬಂಧಿಸಲಾಗಿದೆ. ಪಾರದರ್ಶಕವಾಗಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ. ನಮ್ಮ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಎನ್.ಸಿ.ಬಿ. ವಿರುದ್ಧ ಹೊರಿಸಲಾದ ಆರೋಪಗಳು ಆಧಾರ ರಹಿತವಾಗಿದ್ದು, ದುರುದ್ದೇಶದಿಂದ ಕೂಡಿದೆ. ಇದು ಎನ್.ಸಿ.ಬಿ. ನಡೆಸಿದ ಕಾನೂನು ಕ್ರಮದ ವಿರುದ್ಧ ಪ್ರತೀಕಾರವಾಗಿರಬಹುದು ಎಂದು ಎನ್ಸಿಬಿ ಡೆಪ್ಯುಟಿ ಡಿಜಿ ಜ್ಞಾನೇಶ್ವರ್ ಸಿಂಗ್ ತಿಳಿಸಿದ್ದಾರೆ.
ನಮ್ಮ ಕಾರ್ಯವಿಧಾನವು ವೃತ್ತಿಪರವಾಗಿ, ಕಾನೂನುಬದ್ಧವಾಗಿದೆ. ಪಾರದರ್ಶಕ ಮತ್ತು ಪಕ್ಷಪಾತವಿಲ್ಲದೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.