ಎನ್.ಸಿ.ಬಿ. ಯ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ ಕೊಚ್ಚಿ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಭಾರತೀಯ ನೌಕಾಪಡೆಯ ಜಂಟಿ ಕಾರ್ಯಾಚರಣೆಯಲ್ಲಿ 2500 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.
ವಶಪಡಿಸಿಕೊಂಡ ಡ್ರಗ್ಸ್ ನ ಅಂತಾರಾಷ್ಟ್ರೀಯ ಮೌಲ್ಯ ಸುಮಾರು 12,000 ಕೋಟಿ ರೂಪಾಯಿಗಳಾಗಿದ್ದು, ಇದುವರೆಗೆ ವಶಪಡಿಸಿಕೊಂಡ ಅತಿ ದೊಡ್ಡ ಸರಕು ಇದಾಗಿದೆ ಎಂದು ಮೂಲಗಳು ತಿಳಿಸಿವೆ. ಇರಾಕ್‌ನಿಂದ ಆಸ್ಟ್ರೇಲಿಯಾಕ್ಕೆ ಡ್ರಗ್ಸ್ ರವಾನೆಯಾಗುತ್ತಿತ್ತು.
ಸುಮಾರು 15 ದಿನಗಳ ಹಿಂದೆ, NCB ಮತ್ತು ನೌಕಾಪಡೆಯು ಭಾರತದ ಕರಾವಳಿಯ ಮೂಲಕ ಡ್ರಗ್ಸ್ ರವಾನೆಯ ಬಗ್ಗೆ ಮಾಹಿತಿಯನ್ನು ಪಡೆದಿತ್ತು.