ಹೊಸ ವರ್ಷ ಸಮೀಪಿಸುತ್ತಿದ್ದಂತೆ ದೇಶದಲ್ಲಿ ಒಬ್ಬೊಬ್ಬರಾಗಿ ಡ್ರಗ್ ಪೆಡ್ಲರ್ ಗಳು, ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಾರೆ. ಇಂದು ಬೃಹತ್ ಬೇಟೆ ನಡೆಸಿರುವ ಎನ್ಸಿಬಿ, ಅಂತರಾಷ್ಟ್ರೀಯ ಖದೀಮನೋರ್ವನನ್ನ ಅರೆಸ್ಟ್ ಮಾಡಿದೆ. ಚೆನ್ನೈ ಮತ್ತು ಬೆಂಗಳೂರು ವಿಭಾಗದ NCB ಅಧಿಕಾರಿಗಳಿಂದ ನಡೆದ ಕಾರ್ಯಾಚರಣೆಯಲ್ಲಿ, ಆಫ್ರಿಕಾ ಮೂಲದ ಬೆಂಜಮಿನ್ ಅಲಿಯಾಸ್ ಆಂಟನಿ NCB ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಚೆನ್ನೈನಲ್ಲಿ ಭಾರತೀಯ ಮಹಿಳೆಯನ್ನ ಮದುವೆಯಾಗಿರುವ ಬಂಧಿತ ಬೆಂಜಮೀನ್, ಚೆನ್ನೈ ಹಾಗೂ ಆಸ್ಟ್ರೇಲಿಯಾದ ಎರಡು ಪ್ರಕರಣದಲ್ಲಿ ವಾಂಟೆಡ್ ಆರೋಪಿ. 2018 ರ ಕೊಕೇನ್ ಪ್ರಕರಣದಲ್ಲಿ ಚೆನ್ನೈ ಅಧಿಕಾರಿಗಳಿಗೆ ಬೇಕಾಗಿದ್ದ ಆರೋಪಿ ಅಂತೂ ಸಿಕ್ಕಿಬಿದ್ದಿದ್ದಾನೆ. ಔಷಧಿಗಳನ್ನ ಅಮದು ರಫ್ತು ಮಾಡುವ ಬ್ಯುಸಿನೆಸ್ ಮಾಡಿಕೊಂಡಿರುವವನಂತೆ ನಟನೆ ಮಾಡುತ್ತಿದ್ದ ಬಂಧಿತ ಆರೋಪಿ,
ಬಾಲ್ಯದ ಹೀರೋಗಳೊಂದಿಗೆ ಫೋಟೋ ತೆಗೆದು ಹಂಚಿಕೊಂಡ ಫ್ಯಾನ್ ಬಾಯ್ ಅಮ್ಮಿ
ಮುಂಬೈನಿಂದ ಮರದ ಬಾಕ್ಸ್ ಗಳಲ್ಲಿ ಡ್ರಗ್ಸ್ ತರಿಸಿಕೊಳ್ತಿದ್ದ. ಒಂದೊಂದು ಬಾಕ್ಸ್ ನಲ್ಲಿ 165 ಗ್ರಾಂನಷ್ಟು ಮಾದಕವಸ್ತು ಅಡಗಿಸಿ ತರಿಸಿಕೊಳ್ತಿದ್ದ. ಸೌತ್ ಆಫ್ರಿಕಾದಲ್ಲಿ ಸಿಂಡಿಕೇಟ್ ಮಾಡಿಕೊಂಡು ಡ್ರಗ್ ಮಾರಾಟ ಮಾಡ್ತಿದ್ದ ಆರೋಪಿ, ಡ್ರಗ್ಸ್ ಅನ್ನು ಕೊರಿಯರ್ ಮುಖಾಂತರ ವಿದೇಶಕ್ಕೆ ರವಾನೆ ಮಾಡ್ತಿದ್ದ.
ಬಂಧಿತನಿಂದ 968 ಗ್ರಾಂ ಅಪಂಟೈಮೈನ್, 1.078 ಕೆಜಿ ಎಪಡ್ರಿನ್ ಒಳಗೊಂಡಿರುವ ಎರಡು ಲೋಹದ ರಾಟೆಗಳು ಅಂದರೆ, 2,889 ಕೆಜಿ ಎಫಡ್ರೆನ್ ಅನ್ನು ವಶಪಡಿಸಿಕೊಂಡಿರುವ NCB, ತನಿಖೆ ಮುಂದುವರೆಸಿದೆ.