ಚಿತ್ರ ನಿರ್ಮಾಪಕ ವಿಗ್ನೇಶ್ ಶಿವನ್ ಜೊತಗೆ ರೊಮ್ಯಾಂಟಿಕ್ ಸಂಬಂಧದಲ್ಲಿದ್ದಾರೆ ಎಂದು ಸುದ್ದಿ ಮಾಡುತ್ತಿದ್ದ ಬಹುಭಾಷಾ ನಟಿ ನಯನತಾರಾ ಇದೀಗ ತಮ್ಮ ನಿಶ್ಚಿತಾರ್ಥವನ್ನು ಖಾತ್ರಿ ಪಡಿಸಿದ್ದಾರೆ.
ತಮಿಳಿನ ಜನಪ್ರಿಯ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ನಯನತಾರಾ, ತಮ್ಮ ನಿಶ್ಚಿತಾರ್ಥವು ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಖಾಸಗಿಯಾಗಿ ಜರುಗಿದೆ ಎಂದಿದ್ದಾರೆ.
ನಿಶ್ಚಿತಾರ್ಥವನ್ನು ತೀರಾ ಪ್ರೈವೇಟ್ ಆಗಿ ಮಾಡಿಕೊಂಡರೂ ಮದುವೆಯ ಸಮಾಚಾರವನ್ನು ತಮ್ಮ ಅಭಿಮಾನಿಗಳಿಗೆ ಮುಕ್ತವಾಗಿ ಹಂಚಿಕೊಳ್ಳುವುದಾಗಿ ನಯನತಾರಾ ತಿಳಿಸಿದ್ದಾರೆ.