ಚಿತ್ರದುರ್ಗ: ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ದೇವರ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ನಡೆದಿದ್ದು, 16 ಲಕ್ಷ ರೂ.ಗೆ ಮಾರಾಟವಾಗಿದೆ. ಚಳ್ಳಕೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಟಿ. ಪ್ರಕಾಶ್ ಅವರು 16 ಲಕ್ಷ ರೂಪಾಯಿಗೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ನಾಯಕನಹಟ್ಟಿಯ ವಕೀಲ ಎಸ್. ಉಮಾಪತಿ ಅವರು 21 ಲಕ್ಷ ರೂಪಾಯಿಗೆ ಮುಕ್ತಿ ಬಾವುಟ ಪಡೆದುಕೊಂಡಿದ್ದರು. ಮುಕ್ತಿ ಬಾವುಟವನ್ನು ಪಡೆದುಕೊಂಡರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದ್ದು, ರಾಜಕೀಯ ಮುಖಂಡರು, ಉದ್ಯಮಿಗಳು ಅತಿ ಹೆಚ್ಚಿನ ಬೆಲೆಗೆ ಇದನ್ನು ಹರಾಜಿನಲ್ಲಿ ಖರೀದಿಸುತ್ತಾರೆ.
ಸ್ಥಳೀಯ ಮುಖಂಡರು 5 ಲಕ್ಷ ರೂಪಾಯಿವರೆಗೆ ಹರಾಜು ಕೂಗಿದ್ದು, ಕೊನೆಗೆ ಚಳ್ಳಕೆರೆಯ ಟಿ. ಪ್ರಕಾಶ್ 16 ಲಕ್ಷ ರೂಪಾಯಿಗೆ ಮುಕ್ತಿ ಬಾವುಟ ಖರೀದಿಸಿದ್ದಾರೆ.