ಆಪರೇಷನ್ ಥಂಡರ್ ಸ್ಟಾರ್ಮ್ ಅಡಿ ನಕ್ಸಲ್ ಚಟುವಟಿಕೆ ನಿಗ್ರಹಿಸಲಾಗಿದೆ ಎಂದು ಸಿ.ಆರ್.ಪಿ.ಎಫ್. ಭದ್ರತಾ ವಿಭಾಗದ ಡಿಜಿ ಕುಲದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ವರ್ಷ ಏಪ್ರಿಲ್ ತಿಂಗಳವರೆಗೆ ವಿವಿಧ ಕಡೆಗಳಲ್ಲಿ 14 ನಕ್ಸಲರ ಹತ್ಯೆ ಮಾಡಲಾಗಿದೆ. ಛತ್ತೀಸ್ ಗಢ ರಾಜ್ಯದಲ್ಲಿ 7 ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಜಾರ್ಖಂಡ್ ನಲ್ಲಿ 4, ಮಧ್ಯಪ್ರದೇಶದಲ್ಲಿ ಮೂವರು ನಕ್ಸಲರ ಹತ್ಯೆ ಮಾಡಲಾಗಿದೆ. ದೇಶದ ವಿವಿಧಡೆ ಒಟ್ಟು 578 ನಕ್ಸಲರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
30 ವರ್ಷಗಳ ಕಾಲ ನಕ್ಸಲರ ವಶದಲ್ಲಿದ್ದ ಜಾರ್ಖಂಡ್ ನ ಬುದ್ಧ ಪರ್ವತವನ್ನು ವಶಕ್ಕೆ ಪಡೆಯಲಾಗಿದೆ. ನಕ್ಸಲ್ ಪ್ರಾಬಲ್ಯದ ಪ್ರದೇಶವಾಗಿದ್ದ ಜಾರ್ಖಂಡ್‌ನ ಬುದ್ಧ ಪರ್ವತವನ್ನು ಮುಕ್ತಗೊಳಿಸಲಾಗಿದೆ ಎಂದು ಕುಲದೀಪ್ ಸಿಂಗ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೆಲಿಕಾಪ್ಟರ್ ಸಹಾಯದಿಂದ ಅಲ್ಲಿಗೆ ಸೇನೆ ಕಳುಹಿಸಲಾಗಿದೆ. ಭದ್ರತಾ ಪಡೆಗಳಿಗಾಗಿ ಅಲ್ಲಿ ಶಾಶ್ವತ ಶಿಬಿರವನ್ನು ಸ್ಥಾಪಿಸಲಾಗಿದೆ. ಇದನ್ನು ಮೂರು ವಿಭಿನ್ನ ಕಾರ್ಯಾಚರಣೆಗಳ ಅಡಿಯಲ್ಲಿ ಮಾಡಲಾಗಿದೆ. ಈಗ ನಾವು ಬಿಹಾರ-ಜಾರ್ಖಂಡ್ ನಕ್ಸಲ್ ಮುಕ್ತ ಎಂದು ಹೇಳಬಹುದು ಎಂದರು.
ಜಾರ್ಖಂಡ್ ನ ಬುದ್ಧ ಪರ್ವತ 30 ವರ್ಷಗಳಿಗೂ ಹೆಚ್ಚು ಕಾಲ ನಕ್ಸಲೀಯರ ವಶದಲ್ಲಿತ್ತು. ಅದನ್ನು ಸಿ.ಆರ್.ಪಿ.ಎಫ್. ಸಂಪೂರ್ಣವಾಗಿ ಹಿಡಿತಕ್ಕೆ ಪಡೆದುಕೊಂಡಿದೆ. ಈ ಪ್ರದೇಶವನ್ನು ಹಿಡಿತಕ್ಕೆ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಸಿ.ಆರ್.ಪಿ.ಎಫ್. ಮೂರು ದೊಡ್ಡ ಕಾರ್ಯಾಚರಣೆ ನಡೆಸಿದೆ. ಮೊದಲ ಕಾರ್ಯಾಚರಣೆ ಆಕ್ಟೋಪಸ್, ಎರಡನೇ ಬುಲ್ಬುಲ್ ಮತ್ತು ಮೂರನೇದು ಥಂಡರ್ ಸ್ಟಾಮ್.