ಮುಂಬೈ: ಬರೋಬ್ಬರಿ 220 ಕೇಸ್ ಗಳಲ್ಲಿ ಬೇಕಾಗಿದ್ದ ನಕ್ಸಲ್ ದಂಪತಿ ಪೊಲೀಸರ ಮುಂದೆ ತಾವಾಗಿಯೇ ಶರಣಾಗಿರುವ ಘಟನೆ ನಡೆದಿದೆ.
ಗಿರಿಧರ್ ಅಲಿಯಾಸ್ ನಂಗ್ಸು ತುಮ್ರೆಟಿ ತನ್ನ ಪತ್ನಿ ಸಂಗೀತಾ ಉಸೇಂಡಿ ಅಲಿಯಾಸ್ ಲಲಿತಾಳೊಂದಿಗೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಡಿಸಿಎಂ ದೇವೇಂದ್ರ ಫಡ್ನವಿಸ್ ಸಮ್ಮುಖದಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.
ನಕ್ಸಲ್ ಗಿರಿಧರ್ ವಿರುದ್ಧ 170ಕ್ಕೂ ಹೆಚ್ಚು ಪ್ರಕರಣಗಳು ಇವೆ. ಆತನ ತಲೆಗೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಆತನ ಪತ್ನಿ ಸಂಗೀತಾ ಅಲಿಯಾಸ್ ಲಲಿತಾ ವಿರುದ್ಧ 17 ಪ್ರಕರಣಗಳಿದ್ದು, ಆಕೆ ತಲೆಗೆ 16 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು. ಇದೀಗ ನಕ್ಸಲ್ ದಂಪತಿ ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರ ಮುಂದೆ ಶರಣಾಗಿದ್ದಾರೆ.
ಇದೀಗ ಶರಣಾಗತಿ ಹಾಗೂ ಪುನರ್ವಸತಿ ಯೋಜನೆಯಡಿ ಕೇಂದ್ರ ಹಗೂ ರಾಜ್ಯ ಸರ್ಕಾರಗಳಿಂದ ಗಿರಿಧರ್ ಗೆ 15 ಲಕ್ಷ ರೂ ಹಾಗೂ ಲಲಿತಾಗೆ 8.50 ಲಕ್ಷ ರೂಪಾಯಿ ನೀಡಲಾಗಿದೆ. ಗಿರಿಧರ್ ದಂಪತಿ ಶರಣಾಗತಿಯಿಂದ ಗಡ್ಚಿರೋಲಿಯಲ್ಲಿ ಮಾವೋವಾದಿಗಳ ಚಳುವಳಿಗಳಿಗೆ ಬ್ರೇಕ್ ಬಿದ್ದಂತಾಗಿದೆ.