ಪಾಟ್ನಾ: ಬಿಹಾರ ಪೊಲೀಸರು ಕುಖ್ಯಾತ ನಕ್ಸಲ್ ನಾಯಕ ಅಭಿಜಿತ್ ಯಾದವ್ ನನ್ನು ಬಂಧಿಸಿದ್ದಾರೆ. ಗಯಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಅಭಿಜಿತ್ ಯಾದವ್ ಬಂಧಿಸಲಾಗಿದೆ.
ಬಂಧಿತನಿಂದ ಎಕೆ 56 ರೈಫಲ್, 97 ಜೀವಂತ ಕಾಟ್ರಿಡ್ಜ್, ಸಿಮ್ ಕಾರ್ಡ್, ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಭಿಜಿತ್ ಯಾದವ್ ಭಾಗಿಯಾಗಿದ್ದು, ಬಿಹಾರ, ಜಾರ್ಖಂಡ್ ವ್ಯಾಪ್ತಿಯಲ್ಲಿ ಹಲವು ಕೃತ್ಯಗಳಲ್ಲಿ ಪಾಲ್ಗೊಂಡಿದ್ದ. ಅಭಿಜಿತ್ ಬಂಧನಕ್ಕೆ ಜಾರ್ಖಂಡ್ ಸರ್ಕಾರ 10 ಲಕ್ಷ ರೂಪಾಯಿ ಘೋಷಣೆ ಮಾಡಿದ್ದು, ಬಿಹಾರ ಸರ್ಕಾರ 50,000 ರೂ. ಬಹುಮಾನ ಘೋಷಿಸಿತ್ತು.
2016ರಲ್ಲಿ ಬಿಹಾರದ ಔರಂಗಾಬಾದ್‌ನಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ 7 ಯೋಧರ ಸಾವು ಸೇರಿದಂತೆ ಬಿಹಾರ ಮತ್ತು ಜಾರ್ಖಂಡ್‌ನ ಹಲವು ಪ್ರಕರಣಗಳಲ್ಲಿ ಅಭಿಜಿತ್ ಗಾಗಿ ಪೊಲೀಸರು ಹುಡುಕುತ್ತಿದ್ದರು.