ಮಾನನಷ್ಟ ಪರಿಹಾರ ಕೋರಿ ನಟ ನವಾಜುದ್ದೀನ್ ಸಿದ್ದಿಕಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಾನನಷ್ಟ ಮತ್ತು ಕಿರುಕುಳದ ಆರೋಪದಲ್ಲಿ ಸಹೋದರ ಶಂಶುದ್ದೀನ್ ಮತ್ತು ತಮ್ಮ ಮಾಜಿ ಪತ್ನಿ ಅಂಜನಾ ಪಾಂಡೆ ವಿರುದ್ಧ 100 ಕೋಟಿ ರೂಪಾಯಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಮಾರ್ಚ್ 30 ರಂದು ಬಾಂಬೆ ಹೈಕೋರ್ಟ್‌ನಲ್ಲಿ ದಾವೆಯ ವಿಚಾರಣೆ ನಡೆಯಲಿದೆ.
ನವಾಜುದ್ದೀನ್ ಸಿದ್ದಿಕಿ ತನ್ನ ಸಹೋದರ ತನಗೆ ಮೋಸ ಮತ್ತು ವಂಚನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಅರ್ಜಿಯ ಪ್ರಕಾರ ಸಿದ್ದಿಕಿ ತನ್ನ ಕ್ರೆಡಿಟ್ ಕಾರ್ಡ್, ಎಟಿಎಂ ಕಾರ್ಡ್‌ಗಳು, ಬ್ಯಾಂಕ್ ಪಾಸ್‌ವರ್ಡ್‌ಗಳು ಇತ್ಯಾದಿಗಳನ್ನು 2008 ರಲ್ಲಿ ತನ್ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಸಹೋದರನಿಗೆ ನೀಡಿದ್ದಾರೆ. ಜಂಟಿಯಾಗಿ ಆಸ್ತಿ ಖರೀದಿಸಿದ್ರೂ ಅದನ್ನು ತನ್ನ ಹೆಸರಿನಲ್ಲಷ್ಟೇ ಆಸ್ತಿ ಖರೀದಿಸಿರೋದಾಗಿ ಸಿದ್ದಿಕಿ ತಮ್ಮ ಹೇಳಿಕೊಂಡಿದ್ದಾರಂತೆ.
ಖರೀದಿಸಿದ ಆಸ್ತಿಗಳಲ್ಲಿ ಯಾರಿ ರಸ್ತೆಯಲ್ಲಿ ಒಂದು ಫ್ಲಾಟ್ ಮತ್ತು ಅರೆ-ವಾಣಿಜ್ಯ ಆಸ್ತಿ, ಬುಲ್ಧಾನದಲ್ಲಿ ಒಂದು ಸ್ಥಳ, ಶಾಹಪುರ್‌ನಲ್ಲಿ ಒಂದು ಫಾರ್ಮ್‌ಹೌಸ್, ದುಬೈನಲ್ಲಿ ಒಂದು ಆಸ್ತಿ ಮತ್ತು ಇದರೊಂದಿಗೆ ರೇಂಜ್ ರೋವರ್ಸ್, BMW, ಡುಕಾಟಿ ಸೇರಿದಂತೆ 14 ವಾಹನಗಳು ಸೇರಿವೆ. ಸಹೋದರನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ತನ್ನ ಪತ್ನಿ ಆಲಿಯಾಳನ್ನು ಪ್ರೇರೇಪಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಸಿದ್ದಿಕಿ ತನ್ನ ಆಸ್ತಿಯನ್ನು ಮರಳಿ ಕೇಳಿದಾಗ ಶಂಶುದ್ದೀನ್ ಸಿದ್ದಿಕಿ ಮತ್ತು ಆಲಿಯಾ ಅವರು ವಿಡಿಯೋ ಮತ್ತು ಸಾಮಾಜಿಕ ಮಾಧ್ಯಮದ ಕಾಮೆಂಟ್‌ಗಳ ಮೂಲಕ ಬ್ಲಾಕ್‌ಮೇಲ್ ಮಾಡಿದ್ದಾರೆ ಮತ್ತು ಅವರಿಬ್ಬರೂ 20 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಇದಲ್ಲದೆ 2020 ರಲ್ಲಿ ಮ್ಯಾನೇಜರ್ ಆಗಿ ಶಂಶುದ್ದೀನ್ ಅವರನ್ನು ತೆಗೆದುಹಾಕಿದ ನಂತರ, ನವಾಜ್ ಅವರು ಆದಾಯ ತೆರಿಗೆ, ಜಿಎಸ್‌ಟಿ ಮತ್ತು ಇತರ ಸರ್ಕಾರಿ ಇಲಾಖೆಗಳಿಂದ 37 ಕೋಟಿ ರೂಪಾಯಿಗಳ ಪಾವತಿಸದ ಬಾಕಿಗಳಿಗಾಗಿ ಕಾನೂನು ನೋಟಿಸ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಶಂಶುದ್ದೀನ್ ಮತ್ತು ಆಲಿಯಾ ಮಾಡಿದ ಅನುಚಿತ ಮತ್ತು ಅವಹೇಳನಕಾರಿ ವೀಡಿಯೊಗಳು ಮತ್ತು ಪೋಸ್ಟ್ ಗಳಿಂದಾಗಿ ತಮ್ಮ ಮುಂಬರುವ ಚಲನಚಿತ್ರಗಳನ್ನು ಮುಂದೂಡಲಾಗಿದೆ ಎಂದು ನಟ ಅರ್ಜಿಯಲ್ಲಿ ತಿಳಿಸಿದ್ದಾರೆ. ಆ ಪೋಸ್ಟ್‌ಗಳು ಮತ್ತು ವೀಡಿಯೊಗಳಿಂದಾಗಿ ಸಾಮಾಜಿಕ ಕೂಟಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ನವಾಜ್, ಅಂಜನಾ ಪಾಂಡೆಯವರೊಂದಿಗೆ 2009 ರಲ್ಲಿ ಮದುವೆಯಾದರು. ಅವರಿಗೆ ಯಾನಿ ಮತ್ತು ಶೋರಾ ಎಂಬ ಇಬ್ಬರು ಮಕ್ಕಳಿದ್ದಾರೆ. ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದ ವಿರುದ್ಧ ಕಿರುಕುಳ ಮತ್ತು ನಿಂದನೆಯ ಆರೋಪಗಳನ್ನು ಹೊರಿಸಿದ ಆಲಿಯಾ ಹಲವಾರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರು ನಟನ ಮುಂಬೈ ಬಂಗಲೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಆಸ್ತಿ ವಿವಾದದ ಪ್ರಕರಣವನ್ನೂ ದಾಖಲಿಸಿದ್ದಾರೆ.