ಅದ್ಭುತ ಗಾಯನದ ಮೂಲಕ ನೌಕಾಪಡೆಯ ಅಧಿಕಾರಿಯೊಬ್ಬರು ಜನರ ಮನಗೆದ್ದಿರುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ಅದ್ಭುತ ದನಿಯ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ ಅಧಿಕಾರಿ ವೈಸ್ ಅಡ್ಮಿರಲ್ ಗಿರೀಶ್ ಲೂತ್ರಾ. ನೌಕಾಪಡೆಯಿಂದ ನಿವೃತ್ತರಾಗಿರುವ ಇವರ ಹಾಡಿಗೆ ಮನಸೋಲದವರೇ ಇಲ್ಲವೆನ್ನಬಹುದೇನೋ.
ಸದಾ ಹಚ್ಚಹಸಿರಾಗಿರುವ ಬಾಲಿವುಡ್ ಹಾಡು ‘ಘರ್ ಸೇ ನಿಕಲ್ತೆ ಹೈ’ ಹಾಡನ್ನು ಅವರು ಹಾಡಿದ್ದಾರೆ. ಅವರ ಭಾವಪೂರ್ಣ ಧ್ವನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋ ಇದಾಗಲೇ 61 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಯಾವುದೋ ಒಂದು ಕಾರ್ಯಕ್ರಮದಲ್ಲಿ ಈ ಹಾಡನ್ನು ಅಧಿಕಾರಿ ಹಾಡಿದ್ದಾರೆ. ಗಿರೀಶ್ ಲೂತ್ರಾ ಅವರು ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿರುವಾಗ ಅವರ ಸಮವಸ್ತ್ರವನ್ನು ಧರಿಸಿರುವುದನ್ನು ಕಾಣಬಹುದು. ಲೂತ್ರಾ ಅವರ ಗಾಯನ ಕೌಶಲಕ್ಕೆ ಎಲ್ಲರೂ ತಲೆದೂಗಿದ್ದಾರೆ. “ವಿಶ್ವದ ಅತ್ಯಂತ ಸುಂದರವಾದ ಭಾವನೆ” ಎಂದು ಬಳಕೆದಾರರು ಬರೆದಿದ್ದಾರೆ.
https://twitter.com/AmitKum66508961/status/1592034668760944640?ref_src=twsrc%5Etfw%7Ctwcamp%5Etweetembed%7Ctwterm%5E1592034668760944640%7Ctwgr%5Ede2bfb6407eb0e5f13b776e783a3dfb7445f870d%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fnavy-officer-sings-ghar-se-nikalte-hi-in-viral-video-awesome-says-internet-2297080-2022-11-14