alex Certify BIG NEWS: ಮೂರು ದಿನಗಳ ಕಾಲ ಮಧ್ಯರಾತ್ರಿವರೆಗೆ ಬಳಸಬಹುದು ಧ್ವನಿವರ್ಧಕ; ಹಬ್ಬದ ಪ್ರಯುಕ್ತ ಮುಂಬೈನಲ್ಲಿ ಸಡಿಲಗೊಂಡ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೂರು ದಿನಗಳ ಕಾಲ ಮಧ್ಯರಾತ್ರಿವರೆಗೆ ಬಳಸಬಹುದು ಧ್ವನಿವರ್ಧಕ; ಹಬ್ಬದ ಪ್ರಯುಕ್ತ ಮುಂಬೈನಲ್ಲಿ ಸಡಿಲಗೊಂಡ ನಿಯಮ

ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿ ವರ್ಧಕ ಬಳಕೆ ವಿವಾದ ಹೇಗ್ಹೇಗೆ ಹುಟ್ಟಿಕೊಂಡಿತ್ತು. ಈ ವಿವಾದ ಹೇಗೆಲ್ಲ ತಿರುವು ಪಡೆದುಕೊಂಡು ಕೊನೆಗೆ ಅಂತ್ಯವಾಗಿತ್ತು ಅನ್ನೋದು ನಿಮಗೆಲ್ಲ ಗೊತ್ತು. ಈಗ ಇದೇ ಧ್ವನಿ ವರ್ಧಕ ಮತ್ತೆ ಸುದ್ದಿಯಲ್ಲಿದೆ.

ಮಹಾರಾಷ್ಟ್ರ ಸರ್ಕಾರ ಮುಂಬೈನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಧ್ವನಿವರ್ಧಕಗಳನ್ನ ಮಧ್ಯರಾತ್ರಿ ಸಮಯದವರೆಗೆ ಉಪಯೋಗಿಸಲು ಅನುಮತಿ ನೀಡಿದೆ.

ನವರಾತ್ರಿಯ ಸಮಯದಲ್ಲಿ ಗರ್ಬಾ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತೆ. ಈ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆ ಅನಿವಾರ್ಯ ಎಂದು ಗರ್ಬಾ ಅಭಿಮಾನಿಗಳು ಒತ್ತಾಯಿಸಿದ್ದರಿಂದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯ ಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಧ್ವನಿವರ್ಧಕ ಬಳಕೆಗೆ ಅವಕಾಶಕ್ಕೆ ಅನುಮತಿ ನೀಡಿದ್ದಾರೆ.

ಅಕ್ಟೊಬರ್ 1ರ ಮಧ್ಯರಾತ್ರಿಯವರೆಗೆ ಹಾಗೂ ಅಕ್ಟೋಬರ್ 3 ಮತ್ತು 4ರಂದು ನಡೆಯುವ ನವರಾತ್ರಿ ಉತ್ಸವದ ಸಮಯದಂದು ಮಧ್ಯರಾತ್ರಿಯವರೆಗೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ಇದೆ ಎಂದು ಮುಖ್ಯಮಂತ್ರಿ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿದೆ.

ಪರಿಸರ ಮತ್ತು ಹವಾಮಾನ ಇಲಾಖೆ, ಶಬ್ದಮಾಲಿನ್ಯ ಕುರಿತು 2017ರಲ್ಲಿ ಕೆಲ ಬದಲಾವಣೆ ಮಾಡಿತ್ತು. ಬೆಳಿಗ್ಗೆ 6 ರಿಂದ ಮಧ್ಯಾಹ್ನ12 ರವರೆಗೆ ಧ್ವನಿವರ್ಧಕಗಳ ಬಳಕೆಗೆ ಮಾತ್ರ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದರು. ಈಗ ಹಬ್ಬದ ಪ್ರಯುಕ್ತ ಮೂರು ದಿನಗಳ ಕಾಲ ಮಧ್ಯರಾತ್ರಿಯವರೆಗೆ ಧ್ವನಿವರ್ಧಕಗಳನ್ನ ಬಳಸಬಹುದಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...