
ಉಚ್ಚಂಗಿದುರ್ಗದ ಗುಡ್ಡದ ಮೇಲೆ ನೆಲೆಸಿರುವ ಉಚ್ಚಂಗೆಮ್ಮನನ್ನು ನವರಾತ್ರಿ ದಿನಗಳಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ದಸರಾ ಹಬ್ಬದ ಐದನೇ ದಿನವಾದ ಇಂದು ಉಚ್ಚಂಗೆಮ್ಮ ದೇವಿಗೆ ಕ್ಯಾರೆಟ್, ಬೀನ್ಸ್, ಟೊಮ್ಯಾಟೋ ಸೇರಿದಂತೆ ಅನೇಕ ತರಕಾರಿಗಳಿಂದ ಅಲಂಕಾರ ಮಾಡಲಾಗಿದೆ.
ಭಾನುವಾರದಂದು ಉಚ್ಚಂಗೆಮ್ಮ ದೇವಿಗೆ ತೆಂಗಿನ ಕಾಯಿಯಿಂದ ಸಿಂಗರಿಸಲಾಗಿತ್ತು.
ನವರಾತ್ರಿಯ ಮೂರನೇ ದಿನ ಅಂದರೆ ಶನಿವಾರದಂದು ಹಣ್ಣುಗಳಿಂದ ದೇವಿಯನ್ನು ಸಿಂಗರಿಸಲಾಗಿತ್ತು.
ಶುಕ್ರವಾರದಂದು ನವರಾತ್ರಿ 2 ನೇ ದಿನದ ಹಿನ್ನೆಲೆಯಲ್ಲಿ ಶಾರದಾ ಪೂಜೆ ನೆರವೇರಿಸಲಾಗಿತ್ತು.
ನವರಾತ್ರಿಯ ಸಂಪೂರ್ಣ ದಿನವೂ ಉಚ್ಚಂಗೆಮ್ಮನಿಗೆ ಪ್ರತಿ ವರ್ಷ ವಿಶೇಷ ಪೂಜೆಗಳು ನಡೆಯುತ್ತದೆ. ಮಾತ್ರವಲ್ಲದೇ ದಿನಕ್ಕೊಂದು ರೀತಿಯಲ್ಲಿ ದೇವಿಯನ್ನು ಸಿಂಗರಿಸಲಾಗುತ್ತದೆ. ದೇವಿಯ ಅಲಂಕಾರವನ್ನು ನೋಡಲೆಂದೇ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.