ಇಂದಿನಿಂದ ನವರಾತ್ರಿ ಸಂಭ್ರಮ ಮನೆ ಮಾಡಿದೆ. ತಾಯಿ ದುರ್ಗೆಗೆ ಪೂಜೆ ನಡೆಯುತ್ತಿದೆ. ಇನ್ನು 9 ದಿನಗಳ ಕಾಲ ನವರಾತ್ರಿ ಹಿನ್ನಲೆಯಲ್ಲಿ ಅನೇಕ ಭಕ್ತರು ಉಪವಾಸ ಮಾಡ್ತಾರೆ. ಆದ್ರೆ ಉಪವಾಸದ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದ ಭಕ್ತರು ಕೆಲ ತಪ್ಪುಗಳನ್ನು ಮಾಡ್ತಾರೆ. ಇದರಿಂದಾಗಿ ಅವರು ಉಪವಾಸದ ಪೂರ್ಣ ಫಲವನ್ನು ಪಡೆಯುವುದಿಲ್ಲ .
ನವರಾತ್ರಿಯ ಸಮಯದಲ್ಲಿ ನೀವು ಉಪವಾಸ ಮಾಡುತ್ತಿದ್ದರೆ ಕೆಲ ನಿಯಮಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ.
ಮೃದುವಾದ, ಗುಲಾಬಿ ಬಣ್ಣದ ತುಟಿ ಪಡೆಯಲು ಸಾಕು ಮನೆಯಲ್ಲೇ ಇರುವ ಈ ಒಂದು ವಸ್ತು
ಉಪವಾಸ ಎಂದರೆ, ಆಹಾರ ಸೇವಿಸದಿರುವುದು ಎಂದರ್ಥವಲ್ಲ. ಆಹಾರ ತ್ಯಜಿಸುವ ಜೊತೆಗೆ ಮನಸ್ಸನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಎಂದರ್ಥ. ಉಪವಾಸದ ಸಮಯದಲ್ಲಿ ಎಲ್ಲಾ ಗಮನ ಭಕ್ತಿಯಲ್ಲಿರಬೇಕು.
ನವರಾತ್ರಿಯ ಮೊದಲ ದಿನ ಶ್ರದ್ಧಾ ಭಕ್ತಿಯಿಂದ ಕಳಶ ಸ್ಥಾಪನೆ ಮಾಡಬೇಕು. ಮುಂಜಾನೆ ಸ್ನಾನ ಮಾಡಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ ನಂತರ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ. ಇದರ ನಂತರ ಕಳಶ ಸ್ಥಾಪನೆ ಮಾಡಿ, ಪೂಜೆ ಮಾಡಬೇಕು. ಪ್ರತಿದಿನ ಪೂಜೆ ಮಾಡುವುದನ್ನು ಮರೆಯಬಾರದು. ಬೆಳಿಗ್ಗೆ ಜೊತೆಗೆ ಸಂಜೆ ತುಪ್ಪದ ದೀಪವನ್ನು ಹಚ್ಚುವ ಮೂಲಕ ಆರತಿ ಮಾಡಬೇಕು.
ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೆ ಸಿಕ್ಕಿದೆ ಗುಡ್ ನ್ಯೂಸ್
ಅಖಂಡ ಜ್ಯೋತಿಯನ್ನು ಬೆಳಗಿಸಿದರೆ ಅದನ್ನು 9 ದಿನಗಳ ಕಾಲ ನಿರಂತರವಾಗಿ ಬೆಳಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಕೊನೆಯ ದಿನದ ಪೂಜೆಯ ನಂತರ ಅದನ್ನು ನಂದಿಸಬಾರದು. ತಾನಾಗಿಯೇ ಆರಲು ಬಿಡಬೇಕು. ಸಮಯ ಸಿಕ್ಕಾಗಲೆಲ್ಲಾ ದುರ್ಗಾ ಸಪ್ತಶತಿಯನ್ನು ಪಠಿಸಬೇಕು.
ಉಪವಾಸದಲ್ಲಿ ಹಣ್ಣುಗಳನ್ನು ಸೇವಿಸಬೇಕು. ತಪ್ಪಾಗಿ ಕೂಡ ತಾಮಸಿಕ ಆಹಾರವನ್ನು ತಿನ್ನಬಾರದು. ದುರ್ಗಾ ದೇವಿ, ಮನಸ್ಸು ಶುದ್ಧವಾಗಿರುವ ಜನರನ್ನು ಮಾತ್ರ ಆಶೀರ್ವದಿಸುತ್ತಾಳೆ. ಆದ್ದರಿಂದ ಉಪವಾಸದ ಸಮಯದಲ್ಲಿ ಕೋಪಗೊಳ್ಳಬಾರದು. ನಿಂದನಾತ್ಮಕ ಪದಗಳನ್ನು ಬಳಸಬಾರದು. ಈ ಸಮಯದಲ್ಲಿ ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು.