ನವರಾತ್ರಿ ಹಬ್ಬ ಹತ್ತಿರ ಬರ್ತಿದೆ. ತಾಯಿ ದುರ್ಗೆ ಪೂಜೆಗೆ ಭಕ್ತರು ಸಿದ್ಧರಾಗ್ತಿದ್ದಾರೆ. ಈ ಬಾರಿ ಅಕ್ಟೋಬರ್ 7ರಿಂದ ಅಕ್ಟೋಬರ್ 15ರವರೆಗೆ ನವರಾತ್ರಿ ನಡೆಯಲಿದೆ. ನವರಾತ್ರಿಯಲ್ಲಿ ತಾಯಿ ದುರ್ಗೆ ಪೂಜೆ ಮಾಡಿದ್ರೆ ವಿಶೇಷ ಲಾಭ ಸಿಗಲಿದೆ. ಯಶಸ್ಸು, ಸಂತೋಷ ಮತ್ತು ಸಮೃದ್ಧಿ ಸಿಗಲಿದೆ.
ನವರಾತ್ರಿಯಲ್ಲಿ ಪ್ರತಿ ದಿನ ತಾಯಿ ದುರ್ಗೆ ದರ್ಶನ ಮಾಡಬೇಕು. ಪ್ರತಿ ದಿನ ದುರ್ಗೆ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿದ್ರೆ ಆಸೆಗಳು ಈಡೇರಲಿವೆ. ನವರಾತ್ರಿಯಲ್ಲಿ 9 ದಿನ ಉಪವಾಸ ಮಾಡಲು ಸಾಧ್ಯವಾಗದಿದ್ದರೆ, ನವರಾತ್ರಿಯ ಮೊದಲ ಮತ್ತು ಕೊನೆಯ ದಿನದಂದು ಉಪವಾಸ ಮಾಡಿ. ತಾಯಿಯನ್ನು ಪೂಜಿಸಿ. ಇದು ಜೀವನದಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ನವರಾತ್ರಿಯ ಒಂಭತ್ತೂ ದಿನ ಮನೆಯನ್ನು ಸ್ವಚ್ಛಗೊಳಿಸಬೇಕು. ಮನೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ನವರಾತ್ರಿಯ ಎಲ್ಲ ದಿನ ಹಣ್ಣು, ಆಹಾರ ಇರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಆಹಾರ ಖಾಲಿಯಾಗಬಾರದು.
ಧಾರ್ಮಿಕ ನಂಬಿಕೆಗಳ ಪ್ರಕಾರ, ನವರಾತ್ರಿಯ ಸಮಯದಲ್ಲಿ ಮಾಂಸಾಹಾರವನ್ನು ತಿನ್ನಬಾರದು. ಬೆಳ್ಳುಳ್ಳಿ, ಈರುಳ್ಳಿ ಮತ್ತು ಮದ್ಯ ಸೇವನೆಯಿಂದ ದೂರವಿರಿ. ನವರಾತ್ರಿಯಂದು ಪಕ್ಷಿಗಳಿಗೆ ನೀರು ನೀಡಿ. ಮನೆಗೆ ಬಂದ ಅತಿಥಿಗೆ ಮತ್ತು ಭಿಕ್ಷುಕರಿಗೆ ಗೌರವ ನೀಡಿ, ಸಹಾಯ ಮಾಡಿ.
ನವರಾತ್ರಿಯಲ್ಲಿ ಉಪವಾಸ ಮಾಡುವ ವ್ಯಕ್ತಿ ಚರ್ಮದಿಂದ ಮಾಡಿದ ವಸ್ತುಗಳನ್ನು ಧರಿಸಬಾರದು. ದುರ್ಗೆಗೆ ಆರತಿಯನ್ನು ಮಾಡಿ. ತಾಯಿ ಪೂಜೆಗೆ ಮುರಿದ, ಹಾಳಾದ ಮೂರ್ತಿಯನ್ನು ಬಳಸಬೇಡಿ.