alex Certify ನವರಾತ್ರಿ ಶುಭ ಸಂದರ್ಭದಲ್ಲಿ ಮಾಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿ ಶುಭ ಸಂದರ್ಭದಲ್ಲಿ ಮಾಡಿ ಈ ಕೆಲಸ

ಆಶ್ವೀಜ ಶುದ್ಧ ಪಾಡ್ಯದಂದು ಪ್ರಾರಂಭವಾಗುವ ನವರಾತ್ರಿ ಹಬ್ಬ 9 ದಿನಗಳ ಕಾಲ ನಡೆಯುತ್ತದೆ. ಪುರಾಣದ ಪ್ರಕಾರ ದೇವಿ ಒಂದೊಂದು ಅವತಾರವೆತ್ತಿ ರಾಕ್ಷಸರನ್ನು ಸಂಹರಿಸಿದ್ದರಿಂದ ಲೋಕಕಲ್ಯಾಣಾರ್ಥವಾಗಿ ದೇಶದಲ್ಲಿ ನವರಾತ್ರಿ ಹಾಗೂ ಕರ್ನಾಟಕದಲ್ಲಿ ದಸರಾ ಆಚರಿಸಲಾಗುತ್ತದೆ. ಈ ಒಂಬತ್ತೂ ದಿನಗಳು ಪ್ರಮುಖವಾದದ್ದು.

ನವರಾತ್ರಿಯ ಸಮಯ ಅತ್ಯಂತ ಮಂಗಳಕರವಾಗಿದ್ದು. ದುರ್ಗಾದೇವಿಯ 9 ರೂಪಗಳನ್ನು ಪೂಜಿಸುವ ಈ ಸಮಯದಲ್ಲಿ ಮಾಡುವ ಉಪವಾಸ, ಪೂಜೆ ಹಾಗೂ ಸೇವೆಗಳಿಂದ  ಜೀವನದ ಎಲ್ಲ ದುಃಖಗಳು ದೂರವಾಗುತ್ತವೆ. ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಮನೆಗೆ ತರುವ ಕೆಲ ವಸ್ತುಗಳಿಂದ ಶುಭವಾಗುತ್ತದೆ.

ಕಾರು ಚಲಾಯಿಸುವಾಗ ಗರ್ಭಿಣಿಯರು ಪಾಲಿಸಿ ಈ ನಿಯಮ

ನವರಾತ್ರಿಯಲ್ಲಿ ತುಳಸಿ  ಗಿಡಗಳನ್ನು ತರುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ನೆಲಸುತ್ತಾಳೆ. ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ. ಭಾನುವಾರ ಮತ್ತು ಏಕಾದಶಿ ದಿನ ಬಿಟ್ಟು ತುಳಸಿಗೆ ಪ್ರತಿದಿನ ನೀರನ್ನು ಅರ್ಪಿಸಬೇಕು.

ನವರಾತ್ರಿಯಲ್ಲಿ ಬಾಳೆ ಗಿಡವನ್ನು ನೆಟ್ಟು ಪ್ರತಿದಿನ ನೀರು ಹಾಕಬೇಕು. ಗುರುವಾರ ನೀರು ಮಿಶ್ರಿತ ಹಾಲನ್ನು ಹಾಕುವುದರಿಂದ  ಆರ್ಥಿಕ ಸ್ಥಿತಿ ಶೀಘ್ರದಲ್ಲೇ ಸುಧಾರಿಸುತ್ತದೆ.

ಪುರುಷರೇ ಎಚ್ಚರ…! ಈ ರೋಗ ಲಕ್ಷಣವನ್ನು ನಿರ್ಲಕ್ಷ್ಯಿಸಬೇಡಿ

ಎಲ್ಲಾ ಶುಭ ಕಾರ್ಯಗಳಿಗೂ ನವರಾತ್ರಿ ಸಮಯ ಅತ್ಯುತ್ತಮವಾದದ್ದು. ನವರಾತ್ರಿಯಲ್ಲಿ ವಾಹನ, ಆಭರಣ ಖರೀದಿ ಹಾಗೂ ಗೃಹಪ್ರವೇಶಕ್ಕೆ ಸೂಕ್ತ ಸಮಯ. ವಾರ ದೋಷವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ  ಶುಭ ಕೆಲಸ ಮಾಡಿದ್ರೆ ಉತ್ತಮ ಫಲ ದೊರೆಯುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...