ಬೆಂಗಳೂರು : ನವೋದಯ ವಿದ್ಯಾಲಯ ಸಮಿತಿ (Jawahar Navodaya Vidyalaya Selection Test (JNVST) ಜನವರಿ 20 ರಂದು ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಈ ಹಿನ್ನೆಲೆ ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿದೆ.
ನಿಮ್ಮ ವ್ಯಾಪ್ತಿಗೆ ಒಳಪಡುವ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಮತ್ತು ಆಡಳಿತ ಮಂಡಳಿಗೆ ಸದರಿ ಪರೀಕ್ಷೆ ನಡೆಸಲು ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ತಿಳಿಸುವುದು ಹಾಗೂ ಪರೀಕ್ಷೆ ಕೆಲಸ ನಿರ್ವಹಿಸಲು ಸಿಬ್ಬಂದಿಯನ್ನು ಒದಗಿಸಲು ತಿಳಿಸಿದೆ. ದಿನಾಂಕ: 20.01.2024 ರಂದು ಶಾಲಾ ದಿನವಾಗಿರುವುದರಿಂದ, ಈ ಒಂದು ದಿನ ಪರೀಕ್ಷಾ ಕೇಂದ್ರ ಇರುವ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿ ಸದರಿ ಕೊರತೆಯನ್ನು ಮುಂದಿನ ಒಂದು ಶನಿವಾರದಂದು ಪೂರ್ಣಾವಧಿ ಶಾಲೆ ನಡೆಸುವಂತೆ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ನವೋದಯ ವಿದ್ಯಾಲಯ ಸಮಿತಿ 6 ನೇ ತರಗತಿಯ ಪ್ರವೇಶ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಹಂತ 1 ಪರೀಕ್ಷೆಯು 04 ನವೆಂಬರ್ 2024 ರಂದು ನಡೆದಿದ್ದು, . ಅದರ ನಂತರ, ಹಂತ 2 ಪರೀಕ್ಷೆಯನ್ನು ಅಂದರೆ ಎರಡನೇ ಹಂತವನ್ನು 20 ಜನವರಿ 2024 ರಂದು ನಡೆಸಲಾಗುತ್ತದೆ.
![](https://kannadadunia.com/wp-content/uploads/2024/01/navodya-3.jpg)