’ದಾಹ ಇದ್ದವರು ಬಾವಿ ಹುಡುಕಿಕೊಂಡು ಹೋಗುತ್ತಾರೆ’ ಎಂದು ಹೇಳಿಕೆ ಕೊಡುವ ಮೂಲಕ ಸಂಯುಕ್ತ ಕಿಸಾನ್ ಮೋರ್ಚಾದ ಕೆಂಗಣ್ಣಿಗೆ ಗುರಿಯಾಗಿದ್ದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿವಾದಕ್ಕೀಡಾಗಿದ್ದಾರೆ.
ಕೇಂದ್ರದ ಕೃಷಿ ಸುಧಾರಣಾ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಿರತವಾಗಿರುವ ರೈತರ ಸಂಘಟನೆಗಳ ಸಮಗ್ರ ಸಂಘವಾದ ಸಂಯುಕ್ತ ಕಿಸಾನ್ ಮೋರ್ಚಾ, ಸಿಧುರ ಈ ಹೇಳಿಕೆಯನ್ನು ಖಂಡಿಸಿ ಅವರ ವಿರುದ್ಧ ಧರಣಿ ಕೂರಲು ಮುಂದಾಗಿದೆ.
10 ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಂದ 2357 ಗ್ರಾಮೀಣ್ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅರ್ಜಿ
ರೈತರ ಸಂಘಟನೆಗಳ ಮುಖ್ಯಸ್ಥರನ್ನು ಭೇಟಿ ಮಾಡುವ ಇರಾದೆ ವ್ಯಕ್ತಪಡಿಸಿದ್ದ ಸಿಧು, “ದಾಹವಿದ್ದವರು ಬಾವಿಯತ್ತ ಹೋಗುತ್ತಾರೆ. ಬಾವಿಯೇ ದಾಹವಿದ್ದವರ ಬಳಿಗೆ ಹೋಗುವುದಿಲ್ಲ” ಎಂದಿದ್ದರು.
“ಹೀಗೆ ಹೇಳುವ ಮೂಲಕ ರೈತರೇ ತಮ್ಮ ಬಳಿ ಬರಲಿ ಎಂದು ಸಿಧು ನಿರೀಕ್ಷೆ ಮಾಡುತ್ತಿದ್ದಾರೆ. ಅವರು ರೈತರಿಗೆ ಅವಮಾನ ಮಾಡಿದ್ದಾರೆ” ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಮಂಜೀತ್ ಸಿಂಗ್ ರೈ ತಿಳಿಸಿದ್ದರು.
ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿರುವ ಸಿಧು, “ಕೇಂದ್ರ ಜಾರಿಗೆ ತಂದ ಮೂರು ಕಪ್ಪು ಕಾನೂನುಗಳನ್ನು ಹಿಂದಕ್ಕೆ ಪಡೆಯುವವರೆಗೂ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಕಾಂಗ್ರೆಸ್ ಬಿಗಿಯಾಗಿ ನಿಲ್ಲಲಿದೆ” ಎಂದಿದ್ದಾರೆ.