ನವದೆಹಲಿ: ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಧು ಪಟಿಯಾಲಾ ಜೈಲಿನಲ್ಲಿ ಸುಮಾರು 24 ಗಂಟೆಗಳಿಂದ ಊಟ ಮಾಡಿಲ್ಲ ಎಂದು ಅವರ ವಕೀಲರು ಹೇಳಿದ್ದಾರೆ.
ನವಜೋತ್ ಸಿಂಗ್ ಸಿಧು ಅವರು ಶನಿವಾರ ಸಂಜೆಯವರೆಗೆ ಸುಮಾರು 24 ಗಂಟೆಗಳ ಕಾಲ ಜೈಲಿನಲ್ಲಿದ್ದಾರೆ. ಈ ಅವಧಿಯಲ್ಲಿ ಅವರು ಒಂದು ತುತ್ತು ತಿನ್ನಲಿಲ್ಲ ಎಂದು ಹೇಳಲಾಗಿದೆ.
ಶುಕ್ರವಾರ ರಾತ್ರಿ ಪಟಿಯಾಲಾ ಜೈಲು ಅಧಿಕಾರಿಗಳು ನೀಡಿದ ಭೋಜನವನ್ನು ತಿನ್ನಲು ನಿರಾಕರಿಸಿದರು, ಸಿಧು ಅವರಿಗೆ ಗೋಧಿ ಸೇವನೆ ಅಲರ್ಜಿ ಇದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಮಾಜಿ ಕ್ರಿಕೆಟಿಗ ಕಮ್ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರ ಆರೋಗ್ಯಕ್ಕೆ ಅನುಗುಣವಾಗಿ ಆಹಾರ ಒದಗಿಸಬೇಕು ಎಂದು ವಕೀಲ ಹೆಚ್.ಪಿ.ಎಸ್. ವರ್ಮಾ ಅವರು ಪಟಿಯಾಲ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.