ಕೊಪ್ಪಳ: ಆನೆಗೊಂದಿ ಬಳಿ ಇರುವ ನವವೃಂದಾವನ ಗಡ್ಡೆಯಲ್ಲಿ ಪೂಜೆ ವಿವಾದಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಪೀಠ ಮತ್ತೆ ತಡೆ ನೀಡಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನೆಗೆ ಧಾರವಾಡ ಹೈಕೋರ್ಟ್ ತಡೆ ನೀಡಿ ತೀರ್ಪು ನೀಡಿದೆ. ನವವೃಂದಾವನ ಗಡ್ಡೆಯಲ್ಲಿ ರಾಯರ ಮಠದವರು ಜಯತೀರ್ಥರ ಆರಾಧನೆ ಮಾಡುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ನವವೃಂದಾವನದಲ್ಲಿಯೇ ಜಯತೀರ್ಥರ ವೃಂದಾವನವಿದೆ ಎಂದು ರಾಯರ ಮಠದವರು ವಾದ ಮಂಡಿಸಿದ್ದರು. ಆದರೆ ಇದು ರಘುವರ್ಯರ ವೃಂದಾವನ ಎಂದು ಉತ್ತರಾಧಿಮಠದವರು ವಾದಿಸಿದ್ದರು. ಜಯತೀರ್ಥರ ವೃಂದಾವನ ಕಲಬುರ್ಗಿ ಜಿಲ್ಲೆಯ ಮಳಖೇಡದಲ್ಲಿದೆ ಎಂದು ವಾದಿಸಿದ್ದರು. ಸದ್ಯ ನವವೃಂದಾವನ ಗಡ್ಡೆಯಲ್ಲಿ ಜಯತೀರ್ಥರ ಆರಾಧನೆಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಆನೆಗೊಂದಿಯ ರಾಯರ ಮಠದಲ್ಲಿ ಆಚರಿಸಲು ಮಂತ್ರಾಲಯ ಮಠದವರು ಪ್ರಕಟಣೆ ಹೊರಡಿಸಿದ್ದಾರೆ.