![](https://kannadadunia.com/wp-content/uploads/2024/01/e65bf96c-3630-4838-b904-320d78958e9f-1-1024x662.jpg)
ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಕಾಂಬಿನೇಷನಲ್ಲಿ ಮೂಡಿಬಂದಿದ್ದ ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದವು.
ಗುರುಪ್ರಸಾದ್ ಇದೀಗ 15 ವರ್ಷಗಳ ಬಳಿಕ ‘ರಂಗನಾಯಕ’ ಎಂಬ ಸಿನಿಮಾ ಮೂಲಕ ನವರಸ ನಾಯಕ ಜಗ್ಗೇಶ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರ ತಂಡ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಮಾರ್ಚ್ ಎಂಟು ಶಿವರಾತ್ರಿ ಹಬ್ಬದಂದು ಈ ಚಿತ್ರ ರಾಜ್ಯದಾದ್ಯಂತ ತೆರೆ ಮೇಲೆ ಬರಲಿದೆ.
ಎಆರ್ ವಿಖ್ಯಾತ್ ತಮ್ಮ ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಉಮೇಶ್ ಸಂಕಲನ ಮತ್ತು ಅಶೋಕ್ ಸಾಮ್ರಾಟ್ ಛಾಯಾಗ್ರಹಣವಿದೆ.
![ರಂಗನಾಯಕ' ಚಿತ್ರಕ್ಕಾಗಿ ಐತಿಹಾಸಿಕ ಸೆಟ್: ಜಗ್ಗೇಶ್ ಥ್ರಿಲ್ | Palace-like set erected for Guruprasad and Jaggesh's Ranganayaka Movie Shooting - Kannada Filmibeat](https://kannada.filmibeat.com/img/2021/08/ranganayaka-1-1629738384.jpeg)