ಪ್ರಕೃತಿ, ಎಷ್ಟು ಅದ್ಭುತವೋ ಅಷ್ಟೆ ನಿಗೂಢವಾಗಿದೆ. ಇಂದಿಗೂ ಪ್ರಕೃತಿಯ ಅದೆಷ್ಟೋ ರಹಸ್ಯಗಳು ಅನಾವರಣವಾಗದೇ ಉಳಿದಿವೆ. ಆಗಾಗ ಕೆಲವು ಅದ್ಭುತಗಳು ಎದುರಿಗೆ ಬಂದು ನಮ್ಮೆಲ್ಲರನ್ನ ಮೂಕವಿಸ್ಮಿತರನ್ನಾಗಿ ಮಾಡಿ ಬಿಡುತ್ತೆ. ಅಂತಹದ್ದೇ ಒಂದು ಅದ್ಭುತ ಈಗ ಮಹಾರಾಷ್ಟ್ರದಲ್ಲಿ ಕಂಡು ಬಂದಿದೆ.
ನಾವೆಲ್ಲರೂ ಗಗನದೆತ್ತರದ ಕಲ್ಲಿನ ಪರ್ವತಗಳನ್ನ ನೋಡಿರ್ತೆವೆ. ನಟ್ಟನಡುವೆ ಗಟ್ಟಿಯಾಗಿ ನಿಂತಿರೋ ಕಡಿದಾದ ಕಲ್ಲಿನ ಬೆಟ್ಟಗಳನ್ನೂ ನೋಡಿರ್ತೆವೆ. ಆದರೆ ಇಲ್ಲೊಂದು ಕಲ್ಲಿನ ಬೆಟ್ಟ ಇದೆ ನೋಡಿ. ಈ ಬೆಟ್ಟದ ಒಳಗಿನಿಂದ ನೀರು ಹೇಗೆ ಹರಿದು ಬರುತ್ತಿದೆ. ಆ ಬೆಟ್ಟವೇ ಉಸಿರಾಡುವಂತೆ ಭಾಸವಾಗುತ್ತೆ.
ಈ ದೃಶ್ಯ ನೋಡಿ ಎಂಥವರೂ ಕೂಡಾ ದಂಗಾಗಿ ಹೋಗುತ್ತಾರೆ. ಈ ದೃಶ್ಯ ಕಂಡು ಬಂದಿರೋದು ಮಹಾರಾಷ್ಟ್ರದ ನಿವಾತಿ ನದಿಯ ಬಳಿ. ಇಷ್ಟು ದಿನ ಕೊರೊನಾ ಕಾರಣದಿಂದ ಜನರು ಮನೆಯಲ್ಲೇ ಇದ್ದರು. ಈಗ ಹಂತ-ಹಂತವಾಗಿ ಪ್ರಕೃತಿಯ ಸೊಬಗನ್ನ ಸವಿಯಲು ಬೇರೆ ಬೇರೆ ಕಡೆಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಹೀಗೆ ಮಹಾರಾಷ್ಟ್ರ ನಿವಾತಿ ಬಳಿ ಹೋದಾಗ ಈ ದೃಶ್ಯ ಕಂಡು ಚಕಿತರಾಗಿದ್ದಾರೆ. ಈ ಸೋಶಿಯಲ್ ಮೀಡಿಯಾದಲ್ಲೂ ಈ ದೃಶ್ಯ ಕಂಡು ಇನ್ನಷ್ಟು ಜನರು ಈ ಅದ್ಭುತ ದೃಶ್ಯವನ್ನ ನೋಡಲು ಮಹಾರಾಷ್ಟ್ರದ ಈ ನಿವಾತಿ ನದಿ ಬಳಿ ಆಗಲೇ ಪ್ರಯಾಣ ಬೆಳೆಸಿದ್ದಾರೆ.