ಕಾಂತಿಯುತ ಮುಖ ಯಾರಿಗೆ ಬೇಡ ಹೇಳಿ? ಆಕರ್ಷಕ ಮುಖಕ್ಕಾಗಿ ಎಷ್ಟೆಲ್ಲ ಖರ್ಚು ಮಾಡ್ತೇವೆ. ಬ್ಯೂಟಿ ಪಾರ್ಲರ್ ಗೆ ಹೋಗಿ ಬರ್ತೇವೆ. ಆದ್ರೆ ಮನೆಯಲ್ಲಿರುವ ಸೈಂಧವ ಲವಣ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಶಕ್ತಿ ಹೊಂದಿದೆ. ಆರೋಗ್ಯದ ಜೊತೆಗೆ ಸೌಂದರ್ಯ ವರ್ಧನೆಯಾಗಿ ಕೆಲಸ ಮಾಡುತ್ತೆ ಸೈಂಧವ ಲವಣ.
ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಸೈಂಧವ ಲವಣವನ್ನು ಹಚ್ಚಿಕೊಳ್ಳುವುದ್ರಿಂದ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ. ಡೆಡ್ ಸ್ಕಿನ್ ಸಮಸ್ಯೆ ಕಡಿಮೆಯಾಗುತ್ತದೆ. ವಾರಕ್ಕೆ ಎರಡು ಬಾರಿ ಸೈಂಧವ ಲವಣದ ಪ್ಯಾಕ್ ಹಚ್ಚಿಕೊಳ್ಳುವುದ್ರಿಂದ ಕಪ್ಪು ಕಲೆ ಕಡಿಮೆಯಾಗುತ್ತದೆ.
ಸೈಂಧವ ಲವಣದ ಜೊತೆ ಆಲಿವ್ ಆಯಿಲ್ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದ್ರಿಂದ ಮುಖ ವಿಶೇಷ ಹೊಳಪು ಪಡೆಯುತ್ತದೆ. ಒಣ ಚರ್ಮಕ್ಕೆ ಇದು ಪ್ರಯೋಜನಕಾರಿ. ಸೈಂಧವ ಲವಣಕ್ಕೆ ಆಲಿವ್ ಆಯಿಲ್ ಬೆರೆಸಿರುವುದ್ರಿಂದ ಮುಖ ತೇವಾಂಶ ಪಡೆಯುತ್ತದೆ.
ಒಂದು ದೊಡ್ಡ ಚಮಚ ಓಟ್ಸ್ ತೆಗೆದುಕೊಂಡು ಸಣ್ಣ ಚಮಚದಷ್ಟು ಉಪ್ಪನ್ನು ಬೆರೆಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಬಾದಾಮಿ ಎಣ್ಣೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ.
ಸಾಮಾನ್ಯ ಚರ್ಮದವರು ಸೈಂಧವ ಲವಣಕ್ಕೆ ಮೊಸರು ಬೆರೆಸಿ ಹಚ್ಚಿಕೊಳ್ಳುವುದು ಒಳ್ಳೆಯದು. ಇದು ಚರ್ಮ ಹೊಳಪು ಪಡೆಯಲು ನೆರವಾಗುತ್ತದೆ. ಎರಡು ಚಮಚ ಮೊಸರು, ಒಂದು ಚಮಚ ಸೈಂಧವ ಲವಣ ಹಾಗೂ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ಮುಖವನ್ನು ತೊಳೆದುಕೊಳ್ಳಿ.
ಸೈಂಧವ ಲವಣವನ್ನು ಸ್ಕ್ರಬ್ ಆಗಿ ಬಳಸುವುದರಿಂದ ಚರ್ಮದ ಸತ್ತ ಜೀವಕೋಶಗಳು ನಿವಾರಣೆಯಾಗಿ, ತ್ವಚೆಗೆ ಹೊಳಪು ಬರುತ್ತದೆ. ಸೈಂಧವ ಲವಣದ ಫೇಸ್ ಮಾಸ್ಕ್ ತ್ವಚೆಯ ರಂಧ್ರಗಳನ್ನು ಸ್ವಚ್ಛಗೊಳಿಸಿ, ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಟೋನರ್ ಆಗಿ ಬಳಸುವುದರಿಂದ ತ್ವಚೆಯ ಪಿಹೆಚ್ ಮಟ್ಟ ಸಮತೋಲನಗೊಂಡು, ಕಾಂತಿ ಹೆಚ್ಚುತ್ತದೆ. ಸ್ನಾನದ ನೀರಿಗೆ ಸೇರಿಸುವುದರಿಂದ ತ್ವಚೆ ಮೃದುವಾಗುತ್ತದೆ ಮತ್ತು ವಿಶ್ರಾಂತಿ ದೊರೆಯುತ್ತದೆ.
ಸೈಂಧವ ಲವಣ ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ, ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ, ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ ಮತ್ತು ತ್ವಚೆಗೆ ಕಾಂತಿ ನೀಡುತ್ತದೆ.
ಸೂಕ್ಷ್ಮ ಚರ್ಮ ಹೊಂದಿರುವವರು ಇದನ್ನು ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಒಳ್ಳೆಯದು. ಅತಿಯಾದ ಬಳಕೆಯಿಂದ ತ್ವಚೆ ಒಣಗಬಹುದು.